ದೇಶ

ಹಗುರ ಮೆಷಿನ್‍ ಗನ್‍ಗಳ ಖರೀದಿಗೆ ಇಸ್ರೇಲ್‍ ಸಂಸ್ಥೆಯೊಂದಿಗೆ 880 ಕೋಟಿ ರೂ. ಒಪ್ಪಂದಕ್ಕೆ ಸರ್ಕಾರ ಸಹಿ

Srinivas Rao BV

ನವದೆಹಲಿ: 880 ಕೋಟಿ ರೂ.ಗಳ ವೆಚ್ಚದಲ್ಲಿ 16,479 ಹಗುರ ಮೆಷಿನ್ ಗನ್‌ಗಳನ್ನು (ಎಲ್‌ಎಂಜಿ) ಖರೀದಿಸಲು ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಸ್‌ನೊಂದಿಗೆ ಕೇಂದ್ರ ಸರ್ಕಾರ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.

ಆಧುನಿಕ ಅತ್ಯಾಧುನಿಕ ಹಗುರ ಮೆಷಿನ್ ಗನ್ (ಎಲ್ಎಂಜಿ)ಗಳ ಭಾರತೀಯ ಸಶಸ್ತ್ರ ಪಡೆಗಳ ದೀರ್ಘಕಾಲೀನ ಬೇಡಿಕೆ ಇದಾಗಿತ್ತು. ಖರೀದಿಸಲಾಗುತ್ತಿರುವ ನೆಗೆವ್ ಬಂದೂಕು ಸಮರ ಶಸ್ತ್ರಾಸ್ತ್ರವಾಗಿದ್ದು, ಸದ್ಯ, ಇದನ್ನು ಜಗತ್ತಿನಾದ್ಯಂತ ಹಲವು ದೇಶಗಳು ಬಳಸುತ್ತಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಂದೂಕು ಸದ್ಯ ಬಳಸಲಾಗುತ್ತಿರುವ ಶಸ್ತ್ರಾಸ್ತ್ರಕ್ಕೆ ಹೋಲಿಸಿದರೆ ಸೈನಿಕನ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಶಸ್ತ್ರಾಸ್ತ್ರ ಮುನ್ನೆಲೆ ಪಡೆಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಸಮರ ಸಾಮರ್ಥ್ಯ ಒದಗಿಸಲಿದೆ.
 

SCROLL FOR NEXT