ದೇಶ

ಭಾರತದಲ್ಲಿ 26 ಹೊಸ ಕೇಸುಗಳು ಪತ್ತೆ: ಒಟ್ಟು 195 ಮಂದಿ ಕೊರೋನಾ ಪೀಡಿತರು

Sumana Upadhyaya

ನವದೆಹಲಿ: ಉತ್ತರ ಪ್ರದೇಶದ ಲಕ್ನೊದಲ್ಲಿ 4 ಹೊಸ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 9ಕ್ಕೇರಿದೆ. ಈ ಮೂಲಕ ಭಾರತದಲ್ಲಿ 26 ಹೊಸ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.


ಜಾಗತಿಕ ಮಟ್ಟದಲ್ಲಿ ಕೊರೋನಾ ಮೃತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.ಭಾರತ ಪಂಜಾಬ್ ನಲ್ಲಿ 70 ವರ್ಷದ ವೃದ್ಧ ಕೊರೋನಾ ಸೋಂಕಿಗೆ ಮೃತಪಡುವ ಮೂಲಕ ಸಾವಿನ ಸಂಖ್ಯೆ 4ಕ್ಕೇರಿದೆ. ನಿನ್ನೆ ಕೇಂದ್ರ ಸರ್ಕಾರ ಇದೇ 22ರಿಂದ ಒಂದು ವಾರ ಮಟ್ಟಿಗೆ ಎಲ್ಲಾ ಅಂತಾರಾಷ್ಟ್ರೀಯ ಸಂಚಾರವನ್ನು ರದ್ದುಗೊಳಿಸಿದೆ. 


65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಿಂದ ಹೊರಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಇರಾನ್ ನಲ್ಲಿ ಕೊರೋನಾ ಸೋಂಕು ತಗುಲಿಸಿಕೊಂಡಿದ್ದ ಭಾರತೀಯ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 


ಇಂದಿನ ವರದಿಯಂತೆ ಇದುವರೆಗೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 195ಕ್ಕೇರಿದ್ದು 26 ಹೊಸ ಕೇಸುಗಳು ವಿವಿಧ ರಾಜ್ಯಗಳಲ್ಲಿ ವರದಿಯಾಗಿದೆ. ತೆಲಂಗಾಣದಲ್ಲಿ ಮೂರು, ಆಂಧ್ರ ಪ್ರದೇಶದಲ್ಲಿ 1 ಹೊಸ ಕೇಸುಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.

SCROLL FOR NEXT