ದೇಶ

ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಪತನ: ಸಿಎಂ ಸ್ಥಾನಕ್ಕೆ ಕಮಲ್ ನಾಥ್ ರಾಜಿನಾಮೆ

Shilpa D

ಭೂಪಾಲ್ : ಮಧ್ಯಪ್ರದೇಶ ರಾಜಕೀಯ ಬೃಹನ್ನಾಟಕ, ಮಹತ್ವದ ತಿರುವು ಪಡೆದುಕೊಂಡಿದೆ. ವಿಶ್ವಾಸಮತ ಸಾಬೀತಿಗೂ ಮುನ್ನ ಸಿಎಂ ಸ್ಥಾನಕ್ಕೆ ಕಮಲ್ ನಾಥ್ ರಾಜಿನಾಮೆ ನೀಡಿದ್ದಾರೆ. 

ಮಧ್ಯಪ್ರದೇಶದ ರೆಬೆಲ್ ಶಾಸಕರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಬೆನ್ನಲ್ಲೇ ಸಿಎಂ ಕಮಲ್ ನಾಥ್ ಅವರು ತಮ್ಮ ರಾಜಿನಾಮೆಯನ್ನು ಮಧ್ಯಪ್ರದೇಶ ರಾಜ್ಯಪಾಲ  ಲಾಲ್ ಜಿ ಟಂಡನ್ ಗೆ ರಾಜಿನಾಮೆ ಸಲ್ಲಿಸಿದ್ದಾರೆ. 

ಕಳೆದ 2 ವಾರಗಳಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಜಕೀಯ ಚದುರಂಗದಾಟಗಳಿಂದ  ಪ್ರಜಾಪ್ರಭುತ್ವದ ಬುನಾದಿ ಅಲುಗಾಡುತ್ತಿದೆ ಎಂದು ತಮ್ಮ ಪತ್ರದಲ್ಲಿ ಕಮಲ್ ನಾಥ್ ಬರೆದಿದ್ದಾರೆ. 

ಸಿಎಂ ಹುದ್ದೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಘೋಷಿಸಿದ್ಧಾರೆ. ವಿಶ್ವಾಸಮತ ಸಾಬೀತಿಗೆ ಮುನ್ನವೇ ಕಮಲ್‌ನಾಥ್ ಶಸ್ತ್ರತ್ಯಾಗ ಮಾಡಿದ್ದಾರೆ. ರಾಜೀನಾಮೆಗೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಕಮಲ್‌ನಾಥ್, ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಇಟ್ಟುಕೊಂಡಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಜನತೆ ಅವರನ್ನು ಕ್ಷಮಿಸೋದಿಲ್ಲ ಎಂದು ಹರಿಹಾಯ್ದರು.

SCROLL FOR NEXT