ದೇಶ

ಮ.ಪ್ರದೇಶ ರಾಜಕೀಯ ಬಿಕ್ಕಟ್ಟು: ರೆಬೆಲ್ ಶಾಸಕರ ರಾಜಿನಾಮೆ ಅಂಗೀಕರಿಸಿದ ಸ್ಪೀಕರ್

Srinivasamurthy VN

ಭೋಪಾಲ್: ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್ ಪ್ರಜಾಪತಿ ಕೊನೆಗೂ ತಾರ್ಕಿಕ ಅಂತ್ಯ ಹಾಡಿದ್ದು, ರೆಬೆಲ್ ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಆ ಮೂಲಕ ಕಮಲ್ ನಾಥ್ ಸರ್ಕಾರ ಪತನ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಇಂದು ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಸಿಎಂ ಕಮಲ್ ನಾಥ್ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದು, ಇದಕ್ಕೂ ಮೊದಲೇ ಸ್ಪೀಕರ್ ಎನ್ ಪಿ ಪ್ರಜಾಪತಿ ಅವರು ಕಾಂಗ್ರೆಸ್ ಪಕ್ಷದ 16 ರೆಬೆಲ್ ಶಾಸಕರ ರಾಜಿನಾಮೆಯನ್ನು ಅಂಗೀಕಾರ ಮಾಡಿದ್ದಾರೆ. 

ಇನ್ನು ಸ್ಪೀಕರ್ ಪ್ರಜಾಪತಿ ಅವರು ಸದನ ಮುಂದೂಡುವ ಮೂಲಕ ಉದ್ದೇಶ ಪೂರ್ವಕವಾಗಿ ಅಲ್ಪಮತಕ್ಕೆ ಕುಸಿದಿರುವ ಕಾಂಗ್ರೆಸ್ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಕೂಡಲೇ ವಿಶ್ವಾಸಮತಕ್ಕೆ ಸೂಚನೆ ನೀಡಬೇಕು ಎಂದು ಬಿಜೆಪಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇಂದು ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಕಾರ್ಯ ಪೂರ್ಣಗೊಳ್ಳಬೇಕು. ಸದಸ್ಯ ಕೈ ಎತ್ತುವ ಮೂಲಕ ಸರ್ಕಾರದ ಪರ-ವಿರೋಧ ಮತ ಹಾಕಬೇಕು ಎಂದು ಸೂಚಿಸಿತ್ತು. ಅಲ್ಲದೆ ಇಡೀ ಕಲಾಪವನ್ನು ವಿಡಿಯೋ ರೆಕಾರ್ಡ್ ಮಾಡಲೂ ಸೂಚಿಸಿತ್ತು.

ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ಇಂದು ನಡೆಯುವ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗಿ ತಮ್ಮ ಪಕ್ಷದ ಸೂಚನೆಯನ್ನು ಪಾಲಿಸುವಂತೆ ವಿಪ್ ಜಾರಿ ಮಾಡಿವೆ. ಇನ್ನು ಬೆಂಗಳೂರಿನಲ್ಲಿರುವ ರೆಬೆಲ್ ಶಾಸಕರು ಮಾರ್ಚ್ 10ರಂದೇ ಸ್ಪೀಕರ್ ಗೆ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ.

SCROLL FOR NEXT