ದೇಶ

ಕೊವಿದ್‍ -19: ಯೋಗಿ ಸರ್ಕಾರದಿಂದ ಬಡವರಿಗೆ ಉಚಿತ ಪಡಿತರ, ದಿನಗೂಲಿ ಕಾರ್ಮಿಕರಿಗೆ 1,000 ರೂ

Shilpa D

ಲಕ್ನೋ: ಕೊರೊನಾ ವೈರಸ್ ಕಾರಣದಿಂದ ದುಡಿಮೆಯಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿರುವ ರಾಜ್ಯದ ಕೂಲಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೆರವಾಗಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. 

ಈ ಕಾರ್ಮಿಕರ ದೈನಂದಿನ ಆಗತ್ಯಗಳಿಗಾಗಿ ಇವರುಗಳ ಬ್ಯಾಂಕ್ ಖಾತೆಗಳಿಗೆ ತಲಾ ೧,೦೦೦ ರೂಪಾಯಿ ಜಮಾ ಮಾಡುವುದಾಗಿ ಅವರು ಘೋಷಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಧಾರದಿಂದ ರಾಜ್ಯದ ೧೫ ಲಕ್ಷ ಕೂಲಿ ಕಾರ್ಮಿಕರು ಹಾಗೂ ೨೦.೩೭ ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪ್ರಯೋಜನ ವಾಗಲಿದೆ. ೧೫ ಲಕ್ಷ ದಿನಗೂಲಿ ಕಾರ್ಮಿಕರು, ೨೦.೩೭ ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ೧೦೦೦ ರೂ ಹಣವನ್ನು ನೇರ ನಗದು ವರ್ಗಾವಣೆಯ ಮೂಲಕ ಅವರ ಖಾತೆಗಳಿಗೆ ವರ್ಗಾವಣೆಯಿಸಿ ನೆರವು ಕಲ್ಪಿಸಲು ನಿರ್ಧರಿಸಲಾಗಿದೆ. ಇದರಿಂದ ಆ ಸಮುದಾಯಗಳಿಗೆ ಅಲ್ಪಸ್ವಲ್ಪ ನೆರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ ಭಾನುವಾರದ ಜನತಾ ಕರ್ಫ್ಯೂಗೆ ಬೆಂಬಲ ನೀಡಬೇಕು ಎಂದು ಯೋಗಿ ಅದಿತ್ಯ ನಾಥ್ ಜನರಿಗೆ ಮನವಿ ಮಾಡಿದ್ದಾರೆ. 

ಕೊರೊನಾ ವೈರಸ್ ಬಗ್ಗೆ ಯಾರೂ ಭಯ ಭೀತಿ ಪಡಬಾರದು, ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅಗತ್ಯ ವಸ್ತುಗಳು ಹಾಗೂ ಔಷಧಿಗಳು ರಾಜ್ಯದಲ್ಲಿ ಹೇರಳವಾಗಿದ್ದು, ಜನರು ಸರಕು ಮತ್ತು ಔಷಧಿಗಳಿಗಾಗಿ ಅಂಗಡಿಗಳಿಗೆ ಧಾವಿಸಬಾರದು ಎಂದು ಮನವಿ ಮಾಡಿದ್ದಾರೆ. 

ಉತ್ತರ ಪ್ರದೇಶದಲ್ಲಿ ಈವರೆಗೆ ೨೩ ಜನರಲ್ಲಿ ಕೋವಿಡ್ -೧೯ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಚಿಕಿತ್ಸೆಗಾಗಿ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT