ದೇಶ

ಅಮೆರಿಕಾದಲ್ಲೆಡೆ ವ್ಯಾಪಿಸುತ್ತಿರುವ ಕೊರೋನಾ: ಸುರಕ್ಷಿತರಾಗಿರುವಂತೆ ಭಾರತೀಯರಿಗೆ ಕೇಂದ್ರ ಸಲಹೆ

Manjula VN

ನವದೆಹಲಿ: ಅಮೆರಿಕಾದಾದ್ಯಂತ ವ್ಯಾಪಿಸುತ್ತಿರುವ ಮಹಾಮಾಹಿ ಕೊರೋನಾ ವೈರಸ್ ಈವರೆಗೂ 230 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸುರಕ್ಷಿತರಾಗಿರುವಂತೆ ಹಾಗೂ ಪ್ರತ್ಯೇಕವಾಗಿರುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. 

ಮಾರ್ಚ್ 22 ರಂದು ಭಾರತದಲ್ಲಿ ಜನತಾ ಕರ್ಫ್ಯೂ ಆಚರಿಸಲಾಗುತ್ತಿದ್ದು, ಈಗಾಗಲೇ ಭಾರತ ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಅಮೆರಿಕಾದಲ್ಲಿರುವ ಭಾರತೀಯರು ಸುರಕ್ಷಿತರಾಗಿರುವಂತೆ ಸರ್ಕಾರ ತಿಳಿಸಿದೆ. 

ಅಮೇರಿಕಾದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 13,680ಕ್ಕೆ ತಲುಪಿದ್ದು, 230 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಈ ಹಿಂದೆ ಅಂಕಿ ಅಂಶ ಪ್ರಕಟಿಸಿದ್ದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು, ಸುಮಾರು 9,345 ಪ್ರಕರಣಗಳನ್ನು, ದೃಢಪಡಿಸಿತ್ತು. ಅಲ್ಲದೆ, 150 ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ನೀಡಿತ್ತು ವಾಶಿಂಗ್ಟನ್ ರಾಜ್ಯದಲ್ಲೇ 74 ಜನರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಇಲ್ಲ: ಟ್ರಂಪ್ ಸ್ಪಷ್ಟನೆ
ಕರೋನ ತಡೆಯಲು ಭಾರತದಂತೆ ದೇಶದ ಜನತೆಯನ್ನು ಮನೆಯಲ್ಲೆ ಇರುವಂತೆ ಕೂಡಿಹಾಕುವ ಯಾವ ಅಲೋಚನೆ ಸದ್ಯಕ್ಕೆ ಇಲ್ಲ ಎಂದು ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಎಲ್ಲಾ ಅಮೆರಿಕನ್ನರನ್ನು ಮನೆಯಲ್ಲಿಯೇ ಕಡ್ಡಾಯವಾಗಿ ಇರಿಸಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.

SCROLL FOR NEXT