ದೇಶ

ನನಗೆ ಕೊನೆಯಾಗಲಿ, ಮಕ್ಕಳಿಗೆ ಈ ಕೆಲಸ ಬೇಡವೇ ಬೇಡ: ಪವನ್ ಜಲ್ಲಾದ್

Lingaraj Badiger

ನವದೆಹಲಿ: ಈ ಕೆಲಸ ನನಗೆ ಕೊನೆಯಾಗಲಿ ನನ್ನ ಮಕ್ಕಳಿಗೆ ಈ ಕೆಲಸ ಬೇಡವೇ ಬೇಡ ಎಂದು ಪವನ್ ಜಲ್ಲಾದ್ ಹೇಳಿಕೊಂಡಿದ್ದಾರೆ.

ಹೌದು ಯಾರು ಪವನ್ ಎಂದಿರಾ? ಯಾವ ಕೆಲಸ? ಮಕ್ಕಳಿಗೆ ಯಾಕೆ ಬೇಡ? ಹೀಗೆ ಪ್ರಶ್ನೆಗಳು ಮತ್ತೆ ಮತ್ತೆ ಪುಟಿದೇಳುವುದು ಸಹಜ..!!

ದೇಶದಲ್ಲಿ ನಿನ್ನೆ ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಿ ದಾಖಲೆ ಬರೆದಿರುವ ಪವನ್ ಈಗ ಹೇಳುವ ಮಾತಿನಲ್ಲೇ ಆತನ ನೋವು ಸಂಕಟ ಯಾರಿಗಾದರೂ ಬಹಳ ಸುಲಭವಾಗಿ ಗೊತ್ತಾಗಲಿದೆ. ನೇಣಿಗೇರಿಸುವ ಕೆಲಸದ ಬಗ್ಗೆ ಅವರಿಗೂ ಜಿಗುಪ್ಸೆ ಸಹ ಬಂದುಬಿಟ್ಟಿದೆ.!!

ಈ ಕೆಲಸವನ್ನು ನನ್ನ ಮಕ್ಕಳು ಮಾಡುವುದಕ್ಕೆ ನಾನು ಬಯಸುವುದಿಲ್ಲ ಇದು ನನ್ನೊಂದಿಗೆ ಕೊನೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಪವನ್ , ನಾನು ನನ್ನ ಧರ್ಮವನ್ನು ಪಾಲಿಸಿದ್ದು, ಅಪರಾಧಿಗಳನ್ನು ನೇಣಿಗೆ ಹಾಕುವ ವೇಳೆಯಲ್ಲಿ ಯಾವುದೆ ಪಶ್ಚಾತ್ತಾಪ ಉಂಟಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಕ್ಷಯ್ ಮತ್ತು ಮುಖೇಶ್, ನಂತರ ಪವನ್ ಹಾಗೂ ವಿನಯ್ನನ್ನು ಹಲಗೆಯ ಮೇಲೆ ಕರೆದೊಯ್ಯಲಾಯಿತು, ನಂತರ ನೇಣಿಗೇರಿಸುವ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಅಧಿಕಾರಿಗಳು ನನಗೆ ಆಜ್ಞೆ ನೀಡಿದಾಗ ನೇಣು ಹಾಕಲಾಯಿತು ಎಂದು ಪವನ್ ಜಲ್ಲಾದ್ ಹೇಳಿಕೊಂಡಿದ್ದಾರೆ.

ಏಳು ವರ್ಷದ ನಂತರ ನಿರ್ಭಯಾ ಮತ್ತು ಅವರ ಕುಟುಂಬಕ್ಕೆ ಅಂತಿಮವಾಗಿ ನ್ಯಾಯ ದೊರಕಿದೆ. ಈ ನಡುವೆ ಹ್ಯಾಂಗ್ಮನ್ ಪವನ್ ಜಲ್ಲಾದ್ ಹೆಸರು ಕೂಡ ಇತಿಹಾಸದಲ್ಲಿ ದಾಖಲಾಗಿದೆ.

SCROLL FOR NEXT