ದೇಶ

ಕೊರೋನಾ ವೈರಸ್ ಪೀಡಿತರ ಸಹಾಯಕ್ಕೆ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಿ:ಸರ್ಕಾರಕ್ಕೆ ಸೋನಿಯಾ ಗಾಂಧಿ ಒತ್ತಾಯ

Sumana Upadhyaya

ನವದೆಹಲಿ:ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತಗೊಳ್ಳಬಾರದು. ಈ ವಿಷಮ ಸ್ಥಿತಿಯಲ್ಲಿ ದೇಶ ತಲೆಬಾಗಬಾರದು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.


ಕೊರೋನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು ಹಲವು ಕ್ರಮಗಳನ್ನು ನೀಡಿದ ಅವರು, ಆರ್ಥಿಕ ಕುಸಿತದಿಂದ ಹಾನಿಗೊಳಗಾದವರನ್ನು ಬೆಂಬಲಿಸಲು ಸರ್ಕಾರವು ಸಮಗ್ರ, ವಲಯವಾರು ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಬೇಕಾಗಿದೆ ಎಂದಿದ್ದಾರೆ.


ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶಾದ್ಯಂತ ಕೊರೋನಾ ವೈರಸ್ ತಪಾಸಣೆ ಕೇಂದ್ರಗಳನ್ನು ಹೆಚ್ಚಿಸಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯ ಕೇಂದ್ರಗಳನ್ನು ನಿರ್ದಿಷ್ಟ ಪೋರ್ಟಲ್ ಮೂಲಕ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು ಎಂದಿದ್ದಾರೆ.


ಭಾರತದಲ್ಲಿ ವೈರಸ್ ನ್ನು ಸಮರ್ಥವಾಗಿ ಎದುರಿಸಲು ಸೌಲಭ್ಯಗಳನ್ನು ಹೆಚ್ಚಿಸಲು ವಿಶೇಷ ಬಜೆಟ್ ಹಂಚಿಕೆಗಾಗಿ ಅವರು ಒತ್ತಾಯಿಸಿದ್ದಾರೆ.ವೈರಸ್ ವಿರುದ್ಧ ಹೋರಾಡಲು ವಿಶೇಷ ಆರ್ಥಿಕ ಪ್ರೋತ್ಸಾಹ ನೀಡಬೇಕೆಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ನಕಲಿ ಸ್ಯಾನಿಟೈಸರ್ ಗಳು, ಮಾಸ್ಕ್, ದ್ರವ ಸೋಪುಗಳನ್ನು ಮಾರಾಟ ಮಾಡುವುದು, ಅಧಿಕ ಬೆಲೆಗೆ ಮಾರುವ ಬಗ್ಗೆ ವರದಿಯಾಗಿವೆ. ಸರ್ಕಾರ ಈ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
 

SCROLL FOR NEXT