ವಾಣಿಜ್ಯ ನಗರಿ ಮುಂಬೈ 
ದೇಶ

ಜನತಾ ಕರ್ಫ್ಯೂ: ರೈಲು ಸೇವೆ ಸ್ಥಗಿತ, ಜನರಿಲ್ಲದೆ ಬಿಕೋ ಎನ್ನುತ್ತಿರುವ ವಾಣಿಜ್ಯ ನಗರಿ ಮುಂಬೈ-ವಿಡಿಯೋ!

ಸದಾ ಕಾಲವೂ ವ್ಯಾಪಾರ, ವ್ಯವಹಾರ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತಿದ್ದ ರಾಷ್ಟ್ರದ ವಾಣಿಜ್ಯ ನಗರಿ ಮುಂಬೈ ಕೂಡಾ ಸಂಪೂರ್ಣ ಸ್ಥಬ್ಧಗೊಂಡಿತು

ಮುಂಬೈ: ಜಗತ್ತಿನಾದ್ಯಂತ ಮನುಕುಲದ ಸಂಕಷ್ಟಕ್ಕೆ ಕಾರಣವಾಗಿರುವ ಮಹಾಮಾರಿ ಕೊರೋನಾವೈರಸ್ ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದ್ದ ಜನತಾ ಕರ್ಫ್ಯೂಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದಾ ಕಾಲವೂ ವ್ಯಾಪಾರ, ವ್ಯವಹಾರ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತಿದ್ದ ರಾಷ್ಟ್ರದ ವಾಣಿಜ್ಯ ನಗರಿ ಮುಂಬೈ ಕೂಡಾ ಸಂಪೂರ್ಣ ಸ್ಥಬ್ಧಗೊಂಡಿತು. ರೈಲುಗಳು ನಿಂತಲ್ಲೇ ನಿಂತಿದ್ದು, ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಣಗುಡುತ್ತಿವೆ.  ದಾದರ್, ಅಂಧೇರಿ, ಮತ್ತು ಸಿಎಸ್‌ಎಂಟಿಯಂತಹ ಕೆಲವು ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ಯಾವುದೇ ರೈಲುಗಳ ಓಡಾಟ ಕಂಡುಬರಲಿಲ್ಲ. 

 #WATCH Mumbai: Marine Drive deserted today as people choose to stay indoors amid the nationwide #JantaCurfew announced by Prime Minister Narendra Modi, in wake of #COVID19 pic.twitter.com/AOl8iO5eQT

ಜನ ಹಾಗೂ ವಾಹಗಳಿಂದ ಯಾವಾಗಲೂ ಗಿಜಿಗುಡುತ್ತಿದ್ದ  ಫ್ಲೈಓವರ್, ರಸ್ತೆಗಳು, ಜನ ಹಾಗೂ ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.ಜನರು ಮನೆ ಬಿಟ್ಟು ಹೊರಬಾರದ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುತ್ತಿದ್ದ ಪ್ರದೇಶಗಳು ಜನರಿಲ್ಲದೆ ಬಣಗುಡುತ್ತಿದ್ದವು.

ಸದಾ ಜನಜಗುಂಳಿಯಿಂದ ತುಂಬಿರುತ್ತಿದ್ದ ದಾದಾರ್, ಪ್ರಭಾದೇವಿ, ಬಾಂದ್ರಾ, ಗೋರಗಾಂವ್ ಮೊದಲಾದ ಕಡೆಗಳಲ್ಲಿ ವ್ಯಾಪಾರಸ್ಥರು ಸ್ವಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದರಿಂದ  ಮಾರುಕಟ್ಟೆಗಳು ಖಾಲಿ ಖಾಲಿಯಂತೆ ಭಾಸವಾದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT