ನವದೆಹಲಿ: ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿ ಹಬ್ಬುತ್ತಿರುವ ಮಾರಕ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ದೇಶದಲ್ಲೂ ಹೆಚ್ಚಾಗುತ್ತಿದ್ದು, ಈವರೆಗೂ 390 ಜನರಲ್ಲಿ ಈ ಸೋಂಕು ದೃಢಪಟ್ಟಿದೆ. ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.
ಕೊರೋನಾವೈರಸ್ ನಿಂದಾಗಿ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ನವದೆಹಲಿ, ಪಂಜಾಬ್, ರಾಜಸ್ಥಾನ, ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ, ಮಾಲ್ ಗಳು, ಶಾಪ್ ಗಳನ್ನು ಈ ಮಾಸಾಂತ್ಯದವರೆಗೂ ಸ್ಥಗಿತಗೊಳಿಸಲಾಗಿದ್ದು, ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ಅಂತಾರಾಜ್ಯ ಮಾರ್ಚ್ ಸೇವೆ ಸೇರಿದಂತೆ ಅಗತ್ಯಯೇತರ ಸೇವೆಗಳ ಮೇಲೂ ಮಾರ್ಚ್ 31ರವರೆಗೂ ನಿರ್ಭಂಧ ಹೇರಲಾಗಿದೆ. ದೆಹಲಿ, ಮುಂಬೈ, ಕೊಲ್ಕತ್ತಾ, ಬೆಂಗಳೂರು ಸೇರಿದಂತೆ ಮತ್ತಿತರ ಪ್ರಮುಖ ನಗರಗಳಲ್ಲಿ ಮಾರ್ಚ್ 31ರವರೆಗೆ ಎಲ್ಲಾ ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಕೇರಳ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶಾದ್ಯಂತ 390 ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ.