ದೇಶ

ಕೊರೋನಾ ಭೀತಿ: ಹಣಕಾಸು ವಿಧೇಯಕ ಅಂಗೀಕಾರದ ಬಳಿಕ ಸಂಸತ್ ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆ

Raghavendra Adiga

ನವದೆಹಲಿ: ಹಣಕಾಸು ಮಸೂದೆ ಅಂಗೀಕಾರವಾದ ನಂತರ ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಅಧಿವೇಶನವನ್ನು ಈ ಹಿಂದೆ ಏಪ್ರಿಲ್ 3 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು.

ಕೋವಿಡ್-19 ಭಯದ ಕಾರಣದಿಂದ ಅಧಿವೇಶನವು ನಿಗದಿತ ಸಮಯಕ್ಕಿಂತ ಸುಮಾರು 12 ದಿನಗಳ ಮುಂಚಿತವಾಗಿ ಮುಕ್ತಾಯವಾಗಿದೆ.

ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷದ ನಾಯಕರು ಸೋಮವಾರ ಅಧಿವೇಶನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ವಿವಿಧ ರಾಜ್ಯಗಳು ಘೋಷಿಸಿದ ಲಾಕ್‌ಡೌನ್‌ ಆಗಿರುವುದಲ್ಲದೆ ದೇಶಾದ್ಯಂತ ಕೊರೋನಾ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.

ಈ ನಡುವೆ ಕೊರೋನಾವೈರಸ್ ಹರಡುವಿಕೆಗೆ ಪ್ರತಿಯಾಗಿ ಕ್ಷೇತ್ರಗಳಿಗೆ ಸರ್ಕಾರವು ಯಾವಾಗ ಆರ್ಥಿಕ ಪ್ಯಾಕೇಜ್ ಘೋಷಿಸುತ್ತದೆ ಎಂದು ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷದ ಸದಸ್ಯರು ತಿಳಿಯಲು ಬಯಸಿದ್ದರಿಂದ ಸರ್ಕಾರ ಎರಡು ಮಸೂದೆಗಳನ್ನು ಪರಿಚಯಿಸಿತು ಹಾಗೆಯೇ ಇದೊಂದು ಅಸಾಧಾರಣ ಪರಿಸ್ಥಿತಿ ಎಂದು ಹೇಳಲಾಗಿದೆ. 

ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಇದ್ದು . ಮೊದಲ ಹಂತವು ಜನವರಿ 31 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 11 ರಂದು ಕೊನೆಯಾಗಿತ್ತು.ಮಾರ್ಚ್ 2 ರಂದು ಪ್ರಾರಂಭವಾದ ಎರಡನೇ ಹಂತದ ಅಧಿವೇಶನ ಇಂದು ಮುಕ್ತಾಯವಾಗಿದೆ.

SCROLL FOR NEXT