ದೇಶ

ಮಧ್ಯ ಪ್ರದೇಶ: ವಿಧಾನಸಭೆಯಲ್ಲಿ ಅವಿರೋಧವಾಗಿ ವಿಶ್ವಾಸಮತ ಗೆದ್ದ ಶಿವರಾಜ್ ಸಿಂಗ್ ಚೌಹಾಣ್!

Sumana Upadhyaya

ಭೋಪಾಲ್:ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾನ್ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಧ್ಯಪ್ರದೇಶ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಸರ್ವಾನುಮತದಿಂದ ಗೆದ್ದಿದ್ದಾರೆ.

ಇಂದು ಸದನದಲ್ಲಿ ನಡೆದ ವಿಶ್ವಾಸಮತ ಯಾಚನೆ ಸಂದರ್ಭ ಕಾಂಗ್ರೆಸ್ ನ ಒಬ್ಬರೇ ಒಬ್ಬ ಶಾಸಕರು ಹಾಜರಿರಲಿಲ್ಲ. ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಾರ್ಟಿ ಮತ್ತು ಸ್ವತಂತ್ರ ಶಾಸಕರು ವಿಶ್ವಾಸಮತ ಪರವಾಗಿ ಮತ ಹಾಕಿದರು. 

ಕಾಂಗ್ರೆಸ್ ಮಾಜಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರ ರಾಜೀನಾಮೆಯಿಂದ ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ನಂತರ ನಿನ್ನೆ ಸಂಜೆ ನಾಲ್ಕನೇ ಬಾರಿಗೆ ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣವಚನ ಸ್ವೀಕರಿಸಿದರು. 15 ತಿಂಗಳ ನಂತರ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. 

ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆ ಅವರ ನಿಷ್ಠಾವಂತ 22 ಸಹ ಶಾಸಕರು ರಾಜೀನಾಮೆ ನೀಡಿ ಕಳೆದ ಶನಿವಾರ ಬಿಜೆಪಿ ಸೇರಿದರು. 

SCROLL FOR NEXT