ದೇಶ

ಲಾಕ್ ಡೌನ್ ಎಫೆಕ್ಟ್: ಕುಡಿಯೋಕೆ ಸಿಕ್ತಿಲ್ಲ ಎಂದು ಬೇಸರಗೊಂಡ  ಕೇರಳದ ಮದ್ಯವ್ಯಸನಿ ಆತ್ಮಹತ್ಯೆ!

Raghavendra Adiga

ತ್ರಿಶೂರ್: ಕೊರೋನಾವೈರಸ್ ಹಾವಳಿಯಿಂದ ಭಾರತ ಲಾಕ್ ಡೌನ್ ಆಗಿರುವ ಕಾರಣ ಬಾರ್, ಪಬ್ ವೈನ್ ಶಾಪ್ ಗಳು ಮುಚ್ಚಿದ್ದು ತನಗೆ ಕುಡಿಯಲು ಮದ್ಯ ಸಿಗದ ಕಾರಣ ಬೇಸರಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕುನ್ನಮಕುಳಂ ಸಮೀಪದ ತವನೂರಿನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ  ಕೆ.ಸನೋಜ್ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಸನೊಜ್  ಗೆ ಕುಡಿಯಲು ಮದ್ಯ ಸಿಕ್ಕಿರಲಿಲ್ಲ. ಅದರಿಂದ ಆತ ಬಹಳ ನಿರಾಶನಾಗಿದ್ದ ಎಂದು ಮೃತರ ಸೋದರ ಹೇಳಿದ್ದಾರೆ.

ಕುನ್ನಮಕುಳಂ ಸಿಐ ಸುರೇಶ್ ಕೆ. ಜಿ ಹೇಳುವಂತೆ  "ಸನೊಜ್ ಅವರು ಗುರುವಾರ ರಾತ್ರಿ ಕುಡಿಯಲು ಮದ್ಯ ಸಿಗದ ಕಾರಣ ಬಹಳ ನಿರಾಶೆಗೊಂಡಿದ್ದರು. ಇದೀಗ ಆತ್ಮಹತ್ಯೆ ಸಂಬಂಧ ಕರಣ ದಾಖಲಿಸಲಾಗಿದೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಗುವುದು" 

ದೇಶದಲ್ಲಿ ಅತಿ ಹೆಚ್ಚು ತಲಾ ಮದ್ಯಪಾನ  ಸೇವನೆಯನ್ನು ಹೊಂದಿರುವ ಕೇರಳದಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಅಬಕಾರಿ ಇಲಾಖೆಯ ಸ್ಥೂಲ ಮೌಲ್ಯಮಾಪನವೆಂದರೆ ರಾಜ್ಯದ ಪುರುಷ ಜನಸಂಖ್ಯೆಯ 30 ಪ್ರತಿಶತ ದಷ್ಟು ಮಂದಿ ಮದ್ಯಪಾನ ಮಾಡುತ್ತಾರೆ. ಅಂತಹವರು ಹಠಾತ್ತನೆ ಮದ್ಯಸೇವನೆ ನಿಲ್ಲಿಸುವುದು ಅವರಿಗೆ ಸಮಸ್ಯೆ ತಂದೊಡ್ಡುತ್ತದೆ.ಈ ರೀತಿ ಹಟ್ಃಆತ್ತನೆ ಮದ್ಯ ಸರಬರಾಜು ನಿಲ್ಲಿಸುವುದು ಸಾಮಾಜಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಹಿಂಸಾಚಾರದ ಹೆಚ್ಚಳಕ್ಕೆ ಕಾರಣವಾಗಬಹುದು.

ಈ ಅನಿಶ್ಚಿತ ಪರಿಸ್ಥಿತಿಯನ್ನು ನಿಭಾಯಿಸಲು, ಮದ್ಯದ  ಸರಬರಾಜಿನ ರದ್ದತಿ ಹಿನ್ನೆಲೆ ತೀವ್ರ ನಿರ್ಧಾರ ತೆಗೆದುಕೊಳ್ಳುವವರಿಗೆ ಸಹಾಯ ನೀಡಲು ಇಲಾಖೆ ನಿರ್ಧರಿಸಿದೆ.ಇಲಾಖೆ ತನ್ನ ವ್ಯಾಪ್ತ್ಯಲ್ಲಿ ಡಿ-ಅಡಿಕ್ಷನ್ ಕೇಂದ್ರಗಳ ಸರಪಳಿಯನ್ನು ನಿರ್ವಹಿಸುತ್ತಿದೆ. 'ವಿಮುಕ್ತಿ' ಎಂದು ಹೆಸರಿಸಲಾದ  ಇಂತಹಾ ಕೇಂದ್ರಗಳು  ಪ್ರತಿ ಜಿಲ್ಲೆಯಲ್ಲಿ ಒಂದು ಇರಲಿದೆ. ಆಸ್ಪತ್ರೆಗಳಲ್ಲಿ ಇಂತಹವರಿಗಾಗಿ 10 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 

SCROLL FOR NEXT