ದೇಶ

ಕೋವಿಡ್ -19: ಸಾರ್ಕ್ ರಾಷ್ಟ್ರಗಳ ಸಮಾನ ಎಲೆಕ್ಟ್ರಾನಿಕ್ ವೇದಿಕೆ ಸೃಷ್ಟಿಗೆ ಭಾರತ ಸಲಹೆ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಏಕ ಎಲೆಕ್ಟ್ರಾನಿಕ್ ವೇದಿಕೆ ಆರಂಭಿಸಬೇಕು ಎಂದು ಭಾರತ ಸಾರ್ಕ್ ರಾಷ್ಟ್ರಗಳಿಗೆ ಸಲಹೆ ನೀಡಿದೆ.
 
ಈ ವೇದಿಕೆ ಸೋಂಕಿನ ವಿರುದ್ಧ ಜಂಟಿಯಾಗಿ ಹೋರಾಡುವ ಮಾಹಿತಿ, ಜ್ಞಾನ ಮತ್ತು ಅತ್ಯುತ್ತಮ ಕಾರ್ಯಾಚರಣೆಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ ಎಂದು ಗುರುವಾರ ನಡೆದ ಸಾರ್ಕ್ ರಾಷ್ಟ್ರಗಳ ಆರೋಗ್ಯ ವೃತ್ತಿಪರರ ಆನ್ ಲೈನ್ ಕಾನ್ಫರೆನ್ಸ್ ನಲ್ಲಿ ಭಾರತ ಈ ಸಲಹೆ ಮುಂದಿಟ್ಟಿದೆ. 


ಈ ವೇದಿಕೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಗಣನೀಯ ಕೆಲಸ ನಡೆದಿದೆ ಎಂದು ಸಭೆಯಲ್ಲಿ ಭಾರತ ತಿಳಿಸಿದೆ. ಇದು ಸಿಬ್ಬಂದಿಗೆ ಆನ್ ಲೈನ್ ತರಬೇತಿ, ಪಾಲುದಾರಿಕೆ, ತಜ್ಞರ ಸಲಹೆಗಳು, ಹೊಸ ಸಂಶೋಧನೆಗಳು ಮತ್ತು ಚಿಕಿತ್ಸೆಗಳಿಗೆ ಒಂದು ಬಹುಪಯೋಗಿ ಸಾಧನವಾಗಿ ಕೆಲಸ  ಮಾಡಲಿದೆ. 

ಇದಕ್ಕಾಗಿ ಸಾರ್ಕ್ ರಾಷ್ಟ್ರಗಳು ಇಮೇಲ್ ಇಲ್ಲವೇ ವಾಟ್ಸ್ ಆ್ಯಪ್ ಗ್ರೂಪ್ ಒಂದನ್ನು ರಚಿಸಿ, ಪ್ರಸ್ತುತ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ಭಾರತೀಯ ಪ್ರತಿನಿಧಿ ಸಲಹೆ ನೀಡಿದ್ದಾರೆ.
 

SCROLL FOR NEXT