ದೇಶ

ರೈಲ್ವೆಯ ಎಸಿಯೇತರ ಬೋಗಿಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಗಳ ರಚನೆ

Sumana Upadhyaya

ನವದೆಹಲಿ: ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗೆ ಹವಾ ನಿಯಂತ್ರಿತ ರಹಿತ ರೈಲ್ವೆ ಬೋಗಿಗಳನ್ನು ಪ್ರತ್ಯೇಕ ವಾರ್ಡ್ ಗಳಾಗಿ ಭಾರತೀಯ ರೈಲ್ವೆ ಪರಿವರ್ತಿಸಿದೆ.

ಮುಂದಿನ ಕೆಲ ದಿನಗಳಲ್ಲಿ ಈ ಪ್ರತ್ಯೇಕ ವಾರ್ಡ್ ಗಳಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸರಿಯಾದರೆ ಪ್ರತಿ ರೈಲ್ವೆ ವಲಯಗಳ ರೈಲುಗಳಲ್ಲಿ ಪ್ರತಿವಾರ 10 ಬೋಗಿಗಳನ್ನು ಇದಕ್ಕೆ ಬಳಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ಬೋಗಿಗಳನ್ನು ಅತ್ಯಾಧುನಿಕ ಪ್ರತ್ಯೇಕ ವಾರ್ಡ್ ಗಳನ್ನಾಗಿ ಮಾಡಲು ಬೋಗಿಯ ಮಧ್ಯಮ ಬರ್ತ್ ನ್ನು ತೆಗೆದು ಕೆಳಗಿನ ಕಂಪಾರ್ಟ್ ಮೆಂಟನ್ನು ಪ್ಲೈವುಡ್ ಗೆ ಜೋಡಿಸಿ ವಿಭಾಗ ಮಾಡಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.

ಪ್ರತಿ ಬೋಗಿಯಲ್ಲಿ 10 ಐಸೊಲೇಷನ್ ವಾರ್ಡ್ ಗಳಿರುತ್ತದೆ. ವೈದ್ಯಕೀಯ ಉಪಕರಣಗಳನ್ನು ಜೋಡಿಸಿಕೊಳ್ಳಲು ರೈಲ್ವೆ 220 ವೋಲ್ಟ್ ಎಲೆಕ್ಟ್ರಿಕಲ್ ಪಾಯಿಂಟ್ ಗಳನ್ನು ಪ್ರತಿ ಬೋಗಿಗಳಲ್ಲಿ ಒದಗಿಸಿ ಅಲ್ಲಿ ಗಾಳಿ ಪರದೆ ಮೂಲಕ ಒಬ್ಬ ರೋಗಿಯಿಂದ ಮತ್ತೊಬ್ಬ ರೋಗಿಯನ್ನು ಪ್ರತ್ಯೇಕಿಸಲಾಗುತ್ತದೆ. ಹೊರಗಿನಿಂದ 415 ವೋಲ್ಟ್ ಗಳನ್ನು ರೈಲ್ವೆ ಇಲಾಖೆ ಒದಗಿಸಲಿದೆ.

ಪ್ರತಿ ಬೋಗಿಯಲ್ಲಿರುವ ನಾಲ್ಕು ಶೌಚಾಲಯಗಳನ್ನು ಎರಡು ಬಾತ್ ರೂಂಗಳಾಗಿ ಬದಲಾಯಿಸಿ ಅಲ್ಲಿ ಹ್ಯಾಂಡ್ ಶವರ್, ಬಕೆಟ್ ಮತ್ತು ಮಗ್ ಗಳನ್ನು ಇಡಲಾಗುತ್ತದೆ.

SCROLL FOR NEXT