ದೇಶ

ಕೊರೋನಾ 'ಸೂಪರ್ ಹರಡುವಿಕೆ': ಪಂಜಾಬ್ ನ 24 ಗ್ರಾಮಗಳಲ್ಲಿ 26 ಸಾವಿರ ಮಂದಿಗೆ ಹೋಮ್ ಕ್ವಾರಂಟೈನ್!

Lingaraj Badiger

ಚಂಡೀಗಢ: ಕೊರೋನಾ ವೈರಸ್ 'ಸೂಪರ್ ಹರಡುವಿಕೆ' ಎಂದರೆ ಇದೆ ಇರಬಹುದು. ಪಂಜಾಬ್ ನಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದ, ರಾಜ್ಯದ  24 ಗ್ರಾಮಗಳಲ್ಲಿ ಬೊರೋಬ್ಬರಿ 26 ಸಾವಿರ ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಪಂಜಾಬ್ ನಲ್ಲಿ ಇದುವರೆಗೆ 38 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 28 ಪ್ರಕರಣಗಳು ಓರ್ವ ಸೂಪರ್ ಹರಡುವಿಕೆದಾರ 70 ವರ್ಷದ ಬಲದೇವ್ ಸಿಂಗ್ ರೊಂದಿಗೆ ನೇರ ಸಂಪರ್ಕ ಹೊಂದಿವೆ.

ನವಾನ್‌ಶಹರ್ ಜಿಲ್ಲೆಯ ಪಾಥ್ಲಾವಾ ಗ್ರಾಮದ ಬಲದೇವ್ ಸಿಂಗ್ ಅವರು ಒಬ್ಬ ಧರ್ಮ ಪ್ರಚಾರಕರಾಗಿದ್ದು, ಧಾರ್ಮಿಕ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಇತ್ತಿಚೀಗೆ ಇಬ್ಬರು ವ್ಯಕ್ತಿಗಳೊಂದಿಗೆ ಜರ್ಮನಿ ಹಾಗೂ ಇಟಲಿಗೆ ತೆರಳಿದ್ದರು. ಸಿಂಗ್ ಅವರು ಮಾರ್ಚ್ 7ರಂದು ದೇಶಕ್ಕೆ ವಾಪಸ್ ಆಗಿದ್ದು, ಮಾರ್ಚ್ 18ರಂದು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ.

ಬಲದೇವ್ ಸಿಂಗ್ ಕುಟುಂಬದ 14 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಆತನೊಂದಿಗೆ ಜರ್ಮನಿ ಮತ್ತು ಇಟಲಿಗೆ ತೆರಳಿದ್ದ ಇಬ್ಬರಿಗೂ ಕೊರೋನಾ ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 38 ಪ್ರಕರಣಗಳಲ್ಲಿ 28 ಪ್ರಕರಣಗಳು ನೇರವಾಗಿ ಸಿಂಗ್ ಅವರಿಗೆ ಸಂಬಂಧಿಸಿವೆ.

ಸಿಂಗ್ ಜತೆ ತೆರಳಿದ್ದ ಇಬ್ಬರಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ ಅವರು ಅದನ್ನು ಉಲ್ಲಂಘಿಸಿ ಹೋಲ ಮೊಹಲ್ಲಾ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹೋಲ ಮೊಹಲ್ಲಾ ಉತ್ಸವದಲ್ಲಿ ಇದರಲ್ಲಿ ಸುಮಾರು 20 ಲಕ್ಷ ಭಕ್ತರು ಭಾಗವಹಿಸಿದ್ದರು ಎನ್ನಲಾಗಿದೆ. ಹೀಗಾಗಿ 
ನವಾನ್‌ಶಹರ್ ಜಿಲ್ಲೆಯ 18 ಗ್ರಾಮಗಳನ್ನು ಮತ್ತು ಹೊಷಿಯಾರ್ಪುರ್ ಜಿಲ್ಲೆಯ 6 ಗ್ರಾಮಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, 26 ಸಾವಿರ ಮಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ.

SCROLL FOR NEXT