ದೇಶ

ಲಾಕ್ ಡೌನ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ- ಪ್ರಶಾಂತ್ ಕಿಶೋರ್ 

Nagaraja AB

ನವದೆಹಲಿ: ಲಾಕ್ ಡೌನ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜನೀತಿಜ್ಞ ಪ್ರಶಾಂತ್ ಕಿಶೋರ್ ವಾಗ್ದಾಳಿ ನಡೆಸಿದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ಹರಡುವಿಕೆಯನ್ನು ತಡೆಗಟ್ಟುವ ಚಿಕಿತ್ಸೆ ದೊರೆಯುತ್ತಿಲ್ಲ,  ಅಗತ್ಯವಿರುವ ಜನರಿಗೆ  ಆರೋಗ್ಯ ರಕ್ಷಣೆಯ ಸೌಕರ್ಯಗಳು ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತೀಯರ ಪ್ರತಿಕ್ರಿಯೆ ಇನ್ನೂ ಉತ್ತಮಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಹಿ ಸತ್ಯವೆಂದರೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತದ ಪ್ರತಿಕ್ರಿಯೆ, ಕೇವಲ ಬ್ಯಾಂಕಿಂಗ್ ಲಾಕ್‌ಡೌನ್‌ ಮಾಡುವುದಕ್ಕಿಂತ ಉತ್ತಮವಾಗಬೇಕು, ಮಿಲಿಯನ್‌ಗೆ 10 ಕ್ಕಿಂತ ಕಡಿಮೆ ಕೋವಿಡ್ ಪರೀಕ್ಷೆ ಮತ್ತು ಅಗತ್ಯವಿರುವ ಜನರಿಗೆ ಕೋವಿಡ್ ಚಿಕಿತ್ಸೆ ಹಾಗೂ ಆರೋಗ್ಯ ರಕ್ಷಣೆಯ ಸೌಲಭ್ಯಗಳು ದೊರೆಯುತ್ತಿಲ್ಲ, ಉತ್ತಮವಾಗಲು ಭಾರತ ಅರ್ಹವಿದೆ ಎಂದು ಮಾಜಿ ಜೆಡಿಯು ನಾಯಕ ಟ್ವೀಟ್ ಮಾಡಿದ್ದಾರೆ.
 
ಲಾಕ್‌ಡೌನ್ ನಂತರ ವಲಸಿಗರು ಎದುರಿಸುತ್ತಿರುವ ಕಷ್ಟಗಳನ್ನು ಕಿಶೋರ್ ತಮ್ಮ ಟ್ವೀಟ್‌ಗಳಲ್ಲಿ ಎತ್ತಿ ತೋರಿಸಿದ್ದಾರೆ ಮತ್ತು ಅಧಿಕಾರಿಗಳ ದಬ್ಬಾಳಿಕೆಯನ್ನು ವಿವರಿಸಿದ್ದಾರೆ. 
 
ಜೆಡಿಯು ನಿಂದ ಹೊರಬಂದ ನಂತರ ಎನ್ ಪಿಆರ್, ಎನ್ ಆರ್ ಸಿ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಗಳಲ್ಲಿ ಬಿಜೆಪಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್  ವಾಗ್ದಾಳಿ ಮುಂದುವರೆಸುತ್ತಾ ಬಂದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ನಂತರ, ಕಿಶೋರ್ ಅವರು ಸ್ಥಗಿತಗೊಳಿಸುವಿಕೆಯು 'ಸ್ವಲ್ಪ ಉದ್ದವಾಗಿದೆ ಎಂದು ಹೇಳಿಕೆ ನೀಡಿದ್ದರು. 

SCROLL FOR NEXT