ದೇಶ

ಲಾಕ್ ಡೌನ್ ಪರಿಣಾಮ: ಇಂಧನ ಕೊರತೆ ವಿಷಯವಾಗಿ ಬಿಪಿಸಿಎಲ್ ಹೇಳಿದ್ದಿಷ್ಟು! 

Srinivas Rao BV

ನವದೆಹಲಿ: ಲಾಕ್ ಡೌನ್ ಪರಿಣಾಮ ಎಲ್ಲಾ ದಿನನಿತ್ಯ ಬಳಕೆಯ ಪದಾರ್ಥಗಳಿಗೂ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆ ಸವಾಲಿನ ಸಂಗತಿಯಾಗಿದೆ. 

21 ದಿನಗಳ ಕಾಲ ಪೂರೈಕೆಗೆ ಆಗುವಷ್ಟು ಇಂಧನ ಸಂಗ್ರಹ ಇದೆಯೇ ಎಂಬ ಪ್ರಶ್ನೆಗೆ  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಬಿಪಿಸಿಎಲ್) ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಇಂಧನ ಕೊರತೆ ಎದುರಾಗುವುದಿಲ್ಲ. 21 ದಿನಗಳ ನಂತರವೂ ಸಾಕಷ್ಟು ಪ್ರಮಾಣದಲ್ಲಿ ಇಂಧನ ಲಭ್ಯವಾಗಲಿದೆ ಎಂದು ಹೇಳಿದೆ. 

21 ದಿನಗಳ ಲಾಕ್ ಡೌನ್ ನಿರ್ಧಾರ ಘೋಷಣೆಯಾದ ದಿನದಂದೇ ಇಂಡಿಯನ್ ಆಲಿಯ್ ಅಧ್ಯಕ್ಷ ಸಂಜೀವ್ ಸಿಂಗ್ ಅವರ ತಂದೆ ನಿಧನ ಹೊಂದಿದ್ದರು. ಈ ನೋವಿನ ಹೊರತಾಗಿಯೂ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಅಡಿಗೆ ಅನಿಲ ಸಮರ್ಪಕ ಪೂರೈಕೆಯಾಗುವಂತೆ ನಿಗಾ ವಹಿಸಿದ್ದರು. 

ದೇಶದಲ್ಲಿ ಇಂಧನ ಕೊರತೆ ಎದುರಾಗಿಲ್ಲ, ಎಲ್ ಪಿಜಿ ರಿಫಿಲಿಂಗ್ ಗೆ ಕಾಯ್ದಿರಿಸಬಹುದಾಗಿದೆ ಎಂದು ಸಂಜೀವ್ ಸಿಂಗ್ ತಿಳಿಸಿದ್ದಾರೆ. 

SCROLL FOR NEXT