ದೇಶ

ಎಲ್ಪಿಜಿಗೆ ಹೆಚ್ಚಿದ ಬೇಡಿಕೆ: 15 ದಿನಗಳ ನಂತರವೇ ಬುಕ್ಕಿಂಗ್ ಸ್ವೀಕಾರ- ಸಿಂಗ್ 

Nagaraja AB

ನವದೆಹಲಿ: ಮಾರಕ ಕೊರೋನಾವೈರಸ್ ಕಾರಣ  ಜನತೆ ಮುಂದಿನ 15 ದಿನಗಳ  ಬಳಿಕಷ್ಟೆ ಎಲ್‌ಪಿಜಿ ಬುಕಿಂಗ್ ಮಾಡಬೇಕು ಎಂದು ದೇಶದ ಅತಿದೊಡ್ಡ ತೈಲ ಕಂಪನಿ  ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮನವಿ ಮಾಡಿದೆ

ವಿಡಿಯೋ ಸಂದೇಶದ  ಮೂಲಕ , ಇಂಡಿಯನ್ ಆಯಿಲ್ ಕಾರ್ಪೋರೇಷನ್  (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಅವರು ಮನವಿ ಮಾಡಿದ್ದಾರೆ

ಎಲ್‌ಪಿಜಿ ಸಿಲಿಂಡರ್ ಗಳಿಗೆ  ಕೊರತೆಯಿಲ್ಲ  ಆದರೆ  ಬೇಡಿಕೆ  ಹೆಚ್ಚಾಗಿರುವ ಕಾರಣ 15 ದಿನಗಳ ನಂತರವಷ್ಟೆ ಬುಕ್ಕಿಂಗ್  ಪಾರಂಭಿಸಲಾಗುತ್ತಿದೆ. ಜನತೆ ಗಾಬರಿಪಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. 

ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸುಗಮವಾಗಿದೆ ಪೆಟ್ರೋಲ್, ಡೀಸೆಲ್ ಅಥವಾ ಅಡುಗೆ ಅನಿಲದಿಂದ ಯಾವುದೇ ಕೊರತೆ ಅಥವಾ ಸಮಸ್ಯೆ ಇಲ್ಲ. ವಿಶೇಷವಾಗಿ ಎಲ್ ಪಿಜಿಗಾಗಿ  ಜನತೆ  ನಿರಾಳವಾಗಿರಬೇಕು,  ಎಲ್ ಪಿಜಿ ಪೂರೈಕೆ ಸರಾಗವಾಗಿದ್ದು ಅದೂ  ಹಾಗೆಯೇ ಮುಂದುವರಿಯಲಿದೆ ಎಂದು ಗ್ರಾಹಕರಿಗೆ ಮನವಿ ಮಾಡಿದ್ದಾರೆ

SCROLL FOR NEXT