ದೇಶ

ಲಾಕ್‌ಡೌನ್: ಸಮೋಸಾ ಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಕರೆ ಮಾಡಿದ ಯುವಕ!

Raghavendra Adiga

ರಾಂಪುರ್(ಉತ್ತರ ಪ್ರದೇಶ): ದೇಶಾದ್ಯಂತ ಕೊರೋನಾವೈರಸ್ ಕಾರಣ ಲಾಕ್ ಡೌನ್ ಆಗಿದ್ದು ಸಮೋಸಾ, ಕಚೋರಿ ಸೇರಿ ಪ್ರಮುಖ ಸ್ನ್ಯಾಕ್ಸ್ ಗಳೇನೂ ಸಿಕ್ಕದಂತಾಗಿದೆ. ಈ ನಡುವೆ ಯುವಕನೊಬ್ಬ ತನಗೆ ಸಮೋಸಾ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ ಎಂದು  ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಯಂತ್ರಣ ಕೊಠಡಿಗೆ ಕರೆಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಂಟ್ರೋಲ್ ರೂಮಿನಿಂದ ಕರೆ ಸ್ವೀಕರೊಸೊದೆ ಎಂದು ತಿಳಿದಿದ್ದರೂ ಸಹ ಆತ ನಾಲ್ಕು ಸಮೋಸಾ ಹಾಗೂ ಚಟ್ನಿ ಕಳಿಸಿಕೊಡುವಂತೆ ಕೇಳಿದ್ದಾನೆ. "ನನಗೆ ಸ್ನ್ಯಾಕ್ಸ್ ತಿನ್ನಬೇಕೆಂದು ಬಹಳ ಆಸೆಯಾಗಿದೆ" ಎಂದು ಆತ ಕೇಳಿದ್ದಾನೆ. ಕಡೆಗೆ  ಜಿಲ್ಲಾ ಮ್ಯಾಜಿಸ್ಟ್ರೇಟ್ ಔಜನೇಯ ಕುಮಾರ್ ಯುವಕನಿಗೆ ನಾಲ್ಕು ಸಮೋಸಾ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಆದರೆ ಕೇವಲ ನಾಲ್ಕು ಸಮೋಸಾ ಕಳಿಸಿಕೊಟ್ಟು ಮ್ಯಾಜಿಸ್ಟ್ರೇಟ್ ಸುಮ್ಮನೇ ಕುಳಿತಿಲ್ಲ ಬದಲಿಗೆ ಲಾಕ್ ಡೌನ್ ಸಮಯದಲ್ಲಿ ತೊಂದರೆ ನೀಡಿದ ಆ ಯುವಕನಿಗೆ ಶಿಕ್ಷೆಯನ್ನೂ ನೀಡಿದ್ದಾರೆ. ಸಮೋಸಾ ಕೇಳಿದ್ದ ಯುವಕನಿಗೆ ಚರಂಡಿಯನ್ನು ಸ್ವಚ್ಚಗೊಳಿಸಬೇಕು ಎಂದು ಆದೇಶ ನೀಡಿದ್ದಾರೆ.

ಈ ಕುರಿತಂತೆ ಅಧಿಕಾರಿಗಳು ಯುವಕರ ಹೆಸರನ್ನು ಹೇಳದಿದ್ದರೂ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿಲ್ ಯುವಕ ಚರಂಡಿ ಸ್ವಚ್ಚಗೊಳಿಸುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
 

SCROLL FOR NEXT