ದೇಶ

ಅಸಾಧಾರಣ ಸಮಯದಲ್ಲಿ ಅಸಾಧಾರಣ ಪರಿಹಾರಗಳ ಅಗತ್ಯವಿರುತ್ತದೆ:ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಅಸಾಧಾರಣ ಸಮಯಗಳಲ್ಲಿ ಅಸಾಧಾರಣ ಪರಿಹಾರಗಳು ಬೇಕಾಗುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 21 ದಿನಗಳ ಭಾರತ ಲಾಕ್ ಡೌನ್ ಉದ್ದೇಶಿಸಿ ಹೇಳಿದ್ದಾರೆ.

ಅವರು ನಿನ್ನೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿದೇಶಗಳಲ್ಲಿರುವ 130 ಭಾರತೀಯ ರಾಯಭಾರಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ. ಭಾರತೀಯ ರಾಯಭಾರಿಗಳ ಜೊತೆಗೆ ಸುಮಾರು 75 ನಿಮಿಷಗಳ ಕಾಲ ಸಂವಾದ ನಡೆಸಿದ ಅವರು, ಕೊರೋನಾ ವೈರಸ್ ವಿದೇಶಗಳಿಂದ ಹಬ್ಬುವುದನ್ನು ತಡೆಗಟ್ಟಲು ಜನವರಿ ಮಧ್ಯ.ಭಾಗದಿಂದಲೇ ಭಾರತ ಬೇಗನೆ ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ. ವಿಶ್ವದಲ್ಲಿಯೇ ಅತಿದೊಡ್ಡ ನಿರ್ಬಂಧ ಮತ್ತು ಲಾಕ್ ಡೌನ್ ನ್ನು ಭಾರತ ಕೈಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಮೋದಿ ಹೇಳಿದರು.

ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ನಂತಹ ಕ್ರಮಗಳನ್ನು ತೆಗೆದುಕೊಳ್ಳದೆ ಬೇರೆ ಮಾರ್ಗಗಳಿರಲಿಲ್ಲ. ಅಂತಾರಾಷ್ಟ್ರೀಯ ಸಂಚಾರ ವ್ಯವಸ್ಥೆ, ಹಣಕಾಸು ಮಾರುಕಟ್ಚೆ, ಜಾಗತಿಕ ಆರ್ಥಿಕತೆಯ ಮೇಲೆ ಖಂಡಿತಾ ಇದು ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರೂ ಜಾಗತಿಕ ಮಟ್ಟದಲ್ಲಿ ನಿರ್ಬಂಧ ಅನಿವಾರ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.

SCROLL FOR NEXT