ದೇಶ

ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್, ಸಿಎಂ ಠಾಕ್ರೆಗೆ ನಿರಾಳ

Raghavendra Adiga

ಮುಂಬೈ: ಭಾರತೀಯ  ಚುನಾವಣಾ ಆಯೋಗವು ಮೇ 27 ರ ಮೊದಲು ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರಿಗೆ ನಿರಾಳ ಭಾವ ಮೂಡಿಸಿದೆ.

ಮೇ 27 ರ ಮೊದಲು ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಒಪ್ಪಿರುವ ಆಯೋಗ ಚುನಾವಣೆಯ ಸಮಯದಲ್ಲಿ ಕೋವಿಡ್ ವಿರುದ್ಧ ಸುರಕ್ಷತೆಗಾಗಿ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಿದೆ.

ಇಂದು ಬೆಳಿಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಮಹಾರಾಷ್ಟ್ರ ದಿನಾಚರಣೆ ಹಿನ್ನೆಲೆ ರಾಜಭವನಕ್ಕೆ ಸೌಜನ್ಯದ ಭೇಟಿಕೊಟ್ಟಿದ್ದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗಿದ್ದಾರೆ.ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆಯ ಕುರಿತು ಭಾರತದ ಚುನಾವಣಾ ಆಯೋಗ ಸಭೆ ನಡೆಸಿದ್ದು ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಏಪ್ರಿಲ್ 24ರಂದು ತೆರವಾಗಿದ್ದ ರಾಜ್ಯದ ವಿಧಾನ ಪರಿಷತ್ 9 ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಗುರುವಾರ ಮನವಿ ಮಾಡಿದ್ದರು.ಇದೀಗ ಆಯೋಗವು ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು ಠಾಕ್ರೆ ಪಾಳಯದ ಖುಷಿ ಹೆಚ್ಚಲು ಕಾರಣವಾಗಿದೆ.

SCROLL FOR NEXT