ದೇಶ

ಭಾರತೀಯರು ಮುಸ್ಲಿಂ ವಿರೋಧಿಗಳು ಎಂದು ಅರಬರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ:ವಿದೇಶಾಂಗ ಇಲಾಖೆ

Sumana Upadhyaya

ನವದೆಹಲಿ: ಕೊರೋನಾ ವೈರಸ್ ತಡೆಗಟ್ಟಲು ಭಾರತ ದೇಶದ ಹಲವು ಭಾಗಗಳಲ್ಲಿ ಮುಸಲ್ಮಾನರ ವಿರುದ್ಧ ಕಿರುಕುಳ ನೀಡಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅರಬ್ ದೇಶ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಭಾರತ ಪ್ರತಿಪಾದಿಸಿದೆ.

ಈ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ್, ಗಲ್ಫ್ ರಾಷ್ಟ್ರಗಳ ಜೊತೆ ಭಾರತ ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಬದ್ಧವಾಗಿದ್ದು ಕೋವಿಡ್-19 ನಂತರ ಕೈಗೊಳ್ಳಬೇಕಾದ ಆರ್ಥಿಕ ಪುನಶ್ಚೇತನಕ್ಕೆ ಗಲ್ಫ್ ರಾಷ್ಟ್ರಗಳ ಜೊತೆ ಮಾತುಕತೆಗೆ ಸಹ ಸಿದ್ದ ಎಂದು ಹೇಳಿದ್ದಾರೆ.

ಗಲ್ಫ್ ರಾಷ್ಟ್ರಗಳೊಂದಿಗಿನ ಆಳವಾದ ಉತ್ತಮ ಬಾಂಧವ್ಯ ಇರುವುದರಿಂದಾಗಿಯೇ ರಂಜಾನ್ ಸಮಯದಲ್ಲಿ ಅಲ್ಲಿಗೆ ಅಗತ್ಯ ಆಹಾರ ವಸ್ತುಗಳನ್ನು ಭಾರತ ಪೂರೈಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದು ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರ. ಇಂತಹ ಸುಳ್ಳು ಟ್ವೀಟ್ ಗಳ ಮೂಲಕ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಹಾಳು ಮಾಡಲು ಸಾಧ್ಯವಿಲ್ಲ. ನಮ್ಮ ಸಂಬಂಧದ ವಾಸ್ತವ ಚಿತ್ರಣ ಬೇರೆಯದ್ದೇ ಇದೆ ಎಂದು ಹೇಳಿದ್ದಾರೆ.

SCROLL FOR NEXT