ದೇಶ

ಸಾಧುಗಳ ಭೀಕರ ಹತ್ಯೆ: ಮಹಾರಾಷ್ಟ್ರ ಸರ್ಕಾರದಿಂದ ಸಮಗ್ರ ವರದಿ ಕೋರಿದ ಸುಪ್ರೀಂಕೋರ್ಟ್

Vishwanath S

ನವದೆಹಲಿ: ಪಾಲ್ಘಾರ್ ನಲ್ಲಿ ಗುಂಪಿನಿ0ದ ನಡೆದಿದೆ ಎನ್ನಲಾದ ಹತ್ಯೆ ಪ್ರಕರಣಕ್ಕೆ ಸಂಬ0ಧಿಸಿ ಸುಪ್ರೀಂಕೋರ್ಟ್ ಇಂದು ಮಹಾರಾಷ್ಟ ಸರ್ಕಾರ ಮತ್ತು ಇತರ ಆಡಳಿತಗಳಿಂದ ಸಮಗ್ರ ವರದಿ ಕೋರಿದೆ.

ಆದರೆ, ಪ್ರಕರಣ ಕುರಿತಂತೆ ನಡೆಯುತ್ತಿರುವ ತನಿಖೆಗೆ ತಡೆ ನೀಲು ನ್ಯಾಯಾಲಯ ನಿರಾಕರಿಸಿದೆ. ಭೀಕರ ಹತ್ಯೆ ಪ್ರಕರಣ ಕುರಿತು ಸಮಗ್ರ ಮತ್ತು ನಿಸ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಶಶಾಂಕ್ ಶೇಖರ್ ಜಾ ಎಂಬುವವರು ಸಲ್ಲಿಸಿದ್ದ ಮನವಿ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಾಲಯ ಈ ಸೂಚನೆಗಳನ್ನು ನೀಡಿದೆ.

ಪ್ರಕರಣ ಕುರಿತಂತೆ ಸಮಗ್ರ ವರದಿಯನ್ನು ನೀಡುವಂತೆ ಮಹಾರಾಷ್ಟ ಸರ್ಕಾರಕ್ಕೆ ಸೂಚಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ, ಕೊರೊನ ವೈರಸ್ ತಡೆಗಾಗಿ ಜಾರಿಗೊಳಿಸಲಾಗಿದ್ದ ನಿಯಮಗಳನ್ನು ಘಟನೆ ಉಲ್ಲಂಘಿಸಿದೆ. ಜನರು ಗುಂಪು ಸೇರಲು ಪೊಲೀಸರು ಅವಕಾಶ ನೀಡಿದ್ದೇಕೆ ಎಂದು ಪ್ರಶ್ನಿಸಿ, ಪ್ರಕರಣ ಕುರಿತ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.

ಕಳೆದ ತಿಂಗಳು ಪಾಲ್ಗಾರ್ ಜಿಲ್ಲೆಯ ಜವಾಹರ್ ಪ್ರದೇಶದಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಇಬ್ಬರು ಹಿಂದೂ ಸಂತರು ಮತ್ತು ಕಾರು ಚಾಲಕನನ್ನು ಗ್ರಾಮಸ್ಥರ ಗುಂಪು ಹೊಡೆದು ಸಾಯಿಸಿತ್ತು. ಕಳ್ಳರು ಈ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ ಎಂಬ ವದಂತಿಗಳಿ0ದ ಈ ಘಟನೆ ನಡೆದಿದೆ ಎಂದು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇದನ್ನು ಕೋಮು ಆಯಾಮದಲ್ಲಿ ನೋಡಬಾರದು ಎಂದು ಹೇಳಿದ್ದಾರೆ. ಘಟನೆಎ ಸಂಬ0ಧಿಸಿ ಇದುವರೆಗೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

SCROLL FOR NEXT