ಕೊರೋನಾ ವೈರಸ್: ದೇಶದಲ್ಲಿ 38 ಸಾವಿರ ಗಡಿಯತ್ತ ಸೋಂಕು, ಒಟ್ಟಾರೆ 1,223 ಮಂದಿ ಬಲಿ!
ದೇಶದಲ್ಲಿ ಶನಿವಾರ ಒಂದೇ ದಿನದಲ್ಲಿ 2,293 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಪರಿಣಾಮ ಮತ್ತಷ್ಟು ಆತಂಕ ಹೆಚ್ಚಾಗಿದೆ.
ನವದೆಹಲಿ: ದೇಶದಲ್ಲಿ ಶನಿವಾರ ಒಂದೇ ದಿನದಲ್ಲಿ 2,293 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಪರಿಣಾಮ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಈವರೆಗೂ ಮಹಾಮಾರಿ ಕರೋನ ಸೋಂಕಿಗೆ 1,223 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 37,776 ಮಂದಿ ಸೋಂಕಿಗೊಳಗಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.
ಕೊರೊನಾ ಮಟ್ಟಹಾಕಲು ಈ ಹಿಂದೆ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶದಾದ್ಯಂತ ಲಾಕ್'ಡೌನ್'ಗೆ ಆದೇಶ ನೀಡಿತ್ತು. ಲಾಕ್'ಡೌನ್ ನಡುವೆಯೂ ಮಹಾಮಾರಿ ಹಾವಳಿ ವೈರಸ್ ಆರ್ಭಟ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮತ್ತೆ 19 ದಿನಗಳಿಗೆ ಲಾಕ್'ಡೌನ್ ವಿಸ್ತರಣೆ ಮಾಡಲಾಗಿತ್ತು. ಈಗಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ಮತ್ತೆ 14 ದಿನಗಳ ಕಾಲ ಲಾಕ್'ಡೌನ್ ವಿಸ್ತರಣೆ ಮಾಡಲಾಗಿದೆ.
37,776 ಮಂದಿ ಸೋಂಕಿತರ ಪೈಕಿ ಈವರೆಗೂ 10,018 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 26,535 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಕೊರೋನಾ ವಿರುದ್ದದ ಹೊರಾಟದ ಜೊತೆಗೇ ಆರ್ಥಿಕ ಚಟುವಟಿಕೆಗಳನ್ನೂ ಹಂತಹಂತವಾಗಿ ಆರಂಭಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಹೆಚ್ಚಿನ ವಿನಾಯಿತಿಗಳನ್ನು ಪ್ರಕಟಿಸಿದೆ.
ಇದಕ್ಕಾಗಿ ದೇಶದಲ್ಲಿರುವ 700ಕ್ಕೂ ಹೆಚ್ಚು ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಹಾಗೂ ಹಸಿರು ಎಂದು ವಿಂಗಡಿಸಲಾಗಿದೆ . ಕೆಂಪು ವಲಯದಲ್ಲಿ ಕಟ್ಟುನಿಟ್ಟಾಗಿ ಲಾಕ್'ಡೌನ್ ಜಾರಿ ಮಾಡುವುದಾಗಿ ಹೇಳಿದೆ.