ದೇಶ

ಬಿಕ್ಕಟ್ಟಿನಲ್ಲೂ ಅಧಿಕಾರ ಕಿತ್ತಿಕೊಳ್ಳಲು ಯತ್ನಿಸಬೇಡಿ: ರಾಜ್ಯಪಾಲ ಧಂಖರ್ ಗೆ ಮಮತಾ ತಿರುಗೇಟು

Lingaraj Badiger

ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೊರೋನಾ ವೈರಸ್ ಬಿಕ್ಕಟ್ಟಿನಲ್ಲೂ ರಾಜ್ಯಪಾಲರು ಅಧಿಕಾರ ಕಿತ್ತಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜಭವನ ಮತ್ತು ಸರ್ಕಾರದ ನಡುವೆ ತೀವ್ರ ಬಿಕ್ಕಟ್ಟು ಸೃಷ್ಟಿಯಾದ ನಂತರ ಕಳೆದ ವಾರ ರಾಜ್ಯಪಾಲ ಧಂಖರ್ ಅವರು ಸಿಎಂಗೆ ಎರಡು ಪತ್ರಗಳನ್ನು ಬರೆದಿದ್ದರು.

ರಾಜ್ಯಪಾಲರ ಪತ್ರಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಸಿಎಂ ಮಮತಾ, ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಸಂವಹನ ಮತ್ತು ಲೋಗೊಗಳನ್ನು ಬಳಸಬೇಡಿ ಎಂದು ಕೇಳಿಕೊಂಡಿದ್ದಾರೆ.

"ಅಧಿಕಾರವನ್ನು ಕಸಿದುಕೊಳ್ಳುವ ನಿಮ್ಮ ಪ್ರಯತ್ನಗಳನ್ನು ತೀವ್ರಗೊಳಿಸದಂತೆ ನಾನು ನಿಮ್ಮನ್ನು ಕೋರುತ್ತೇನೆ, ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ .... ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ನಿರಂತರ ಟ್ವೀಟ್‌ಗಳಿಗಾಗಿ ಅಧಿಕೃತ ಸಂವಹನ / ಲೋಗೊಗಳನ್ನು ಬಳಸುವುದನ್ನು ನೀವು ತ್ಯಜಿಸಬೇಕು" ಎಂದು ಮಮತಾ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

"ಅಂತಹ ಪದಗಳು ಮತ್ತು ಅಂತಹ ವಿಷಯಗಳು, ಒಬ್ಬ ಚುನಾಯಿತ ಮುಖ್ಯಮಂತ್ರಿಗೆ ರಾಜ್ಯಪಾಲರು ಬಳಸಿರುವುದು ಭಾರತೀಯ ಸಾಂವಿಧಾನ ಮತ್ತು ರಾಜಕೀಯ ಇತಿಹಾಸದಲ್ಲಿ ಅಭೂತಪೂರ್ವವಾಗಿವೆ ಎಂದು ದೀದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮತ್ತು ನನ್ನ ಮಂತ್ರಿಗಳ ಹಾಗೂ ಅಧಿಕಾರಿಗಳ ವಿರುದ್ಧದ ನೀವು ಬಳಸಿದ ಪದಗಳು ಪ್ರಚೋದಕ, ಹಿತಾಸಕ್ತಿ, ಬೆದರಿಸುವ ಮತ್ತು ನಿಂದನೀಯ ಎಂದು ವರ್ಣಿಸಬಹುದು" ಎಂದು ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರಿಗೆ ಬರೆದ 14 ಪುಟಗಳ ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.

SCROLL FOR NEXT