ದೇಶ

ಬಾಯ್ಸ್ ಲಾಕರ್ ರೂಮ್ ವಿವಾದ: ದೆಹಲಿಯ ಶಾಲಾ ವಿದ್ಯಾರ್ಥಿ ಬಂಧನ, ಇತರ 22 ಬಾಲಕರು ಪತ್ತೆ!

Nagaraja AB

ನವದೆಹಲಿ: ಬಾಯ್ಸ್ ಲಾಕರ್ ರೂಮ್ ವಿವಾದದ ತನಿಖೆಯನ್ನು ದೆಹಲಿ ಪೊಲೀಸರು ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡ ನಂತರ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯರ ಆಕ್ಷೇಪಾರ್ಹ ಫೋಟೊಗಳನ್ನು ಹಂಚಿ, ಅತ್ಯಾಚಾರವನ್ನು ವೈಭವೀಕರಿಸುವುದಕ್ಕೆ ಸಂಬಂಧಿಸಿದಂತೆ ಸೈಬರ್ ಘಟಕದ ಪೊಲೀಸರು ಶಾಲಾ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ 15 ವರ್ಷದ ವಿದ್ಯಾರ್ಥಿ ಬಂಧಿತನಾಗಿದ್ದು, ಇತರ 22 ಬಾಲಕರನ್ನು ಗುರುತಿಸಲಾಗಿದ್ದು, ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ, ಬಂಧಿತ ಆರೋಪಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಇನ್ಸ್ಟಾಗ್ರಾಮ್ ಚಾಟ್  ಗ್ರೂಪಿನಲ್ಲಿ ಸೋರಿಯಾದ ಸ್ಕ್ರೀನ್ ಶಾಟ್ ಗಳು ದೇಶದಲ್ಲಿ ಅತ್ಯಾಚಾರ ಸಂಸ್ಕ್ರೃತಿಯ ಬಿರುಗಾಳಿ ಎಬ್ಬಿಸಿತ್ತು. ಹಲವಾರು ಬಾಲಕರು ಅಪ್ರಾಪ್ತ ಬಾಲಕಿಯರ ಅಕ್ಷೇಪಾರ್ಹ ಪೋಟೋಗಳನ್ನು ಹಂಚಿಕೊಂಡಿದ್ದು, ಸಾಮೂಹಿಕ ಅತ್ಯಾಚಾರದ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ. 

ಐಪಿಸಿ ಸೆಕ್ಷನ್ 465( ವಂಚನೆ) 471 ( ನಕಲಿ ದಾಖಲೆ ಬಳಕೆ) 469 ( ವರ್ಚಸ್ಸಿಗೆ ಹಾನಿ ಮಾಡಲು ನಕಲಿ) 509 (
ಯಾವುದೇ ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ  67 ಮತ್ತು 67 ಸೆಕ್ಷನ್ ಅಡಿಯಲ್ಲಿ ದೆಹಲಿ ಸೈಬರ್ ಘಟಕದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ದಕ್ಷಿಣ ದೆಹಲಿಯ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲರು ಸಾಕೇತ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದರು. ಇದನ್ನು ದೆಹಲಿ ಸೈಬರ್ ಘಟಕಕ್ಕೆ ವರ್ಗಾಯಿಸಲಾಗಿತ್ತು. ಈ ಇನ್ಸ್ಟಾಗ್ರಾಮ್ ಗ್ರೂಪ್ ಗೆ ಸಂಬಂಧಿಸಿದ ಪೋಷಕರು ಕೂಡಾ ಉತ್ತರ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು. 

ಈ ಇನ್ಸ್ಟಾಗ್ರಾಮ್  ಗುಂಪಿನ ಸದಸ್ಯರು ಮತ್ತು ಆಡ್ಮಿನ್  ಹೆಸರು, ಐಪಿ ವಿಳಾಸಗಳು ಮತ್ತಿತರ ವಿವರಗಳನ್ನು ಕೇಳಿದ್ದೇವೆ ಎಂದು ಸೈಬರ್ ಕ್ರೈಮ್ ಡಿಸಿಪಿ ಅನಿಶ್ ರಾಯ್  ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಐಎಎನ್ ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ

SCROLL FOR NEXT