ದೇಶ

ಕ್ವಾರಂಟೈನ್ ನಲ್ಲಿದ್ದ ತಬ್ಲಿಘಿ ಸದಸ್ಯರ ಬಿಡುಗಡೆಗೆ ದೆಹಲಿ ಸರ್ಕಾರ ಆದೇಶ

Lingaraj Badiger

ನವದೆಹಲಿ: ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಸುಮಾರು 4 ಸಾವಿರ ತಬ್ಲಿಘಿ ಸದಸ್ಯರನ್ನು ಬಿಡುಗಡೆ ಮಾಡುವಂತೆ ದೆಹಲಿ ಸರ್ಕಾರ ಬುಧವಾರ ಆದೇಶಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ಎಲ್ಲಾ ತಬ್ಲಿಘಿ ಸದಸ್ಯರನ್ನು ಬಿಡುಗಡೆ ಮಾಡುವಂತೆ ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಆದೇಶಿಸಿದ್ದಾರೆ. ಅಲ್ಲದೆ ಮರ್ಕಝ್ ಪ್ರಕರಣದಲ್ಲಿ ಆರೋಪಿಗಳಾಗಿರುವವರನ್ನು ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ತಬ್ಲಿಘಿ ಸದಸ್ಯರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸುವ ಅಗತ್ಯ ಇದ್ದು, ಈ ಸಂಬಂಧ ದೆಹಲಿ ಸರ್ಕಾರ ಇತರೆ ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದ್ದೆ ಎಂದು ಜೈನ್ ತಿಳಿಸಿದ್ದಾರೆ.

ಕ್ವಾರಂಟೈನ್ ನಲ್ಲಿ ಒಟ್ಟು 4 ಸಾವಿರ ತಬ್ಲಿಘಿಗಳ ಪೈಕಿ 900 ಮಂದಿ ದೆಹಲಿಯವರಾಗಿದ್ದರು, ಉಳಿದವರು ಇತರೆ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ಪೈಕಿ ಬಹುತೇಕರು ತಮಿಳುನಾಡು ಮತ್ತು ತೆಲಂಗಾಣದವರಾಗಿದ್ದಾರೆ ಅವರು ಹೇಳಿದ್ದಾರೆ.

SCROLL FOR NEXT