ದೇಶ

ಉತ್ತರ ಪ್ರದೇಶ: ಕೋವಿಡ್-19 ಸೋಂಕು ಹರಡುತ್ತಿದ್ದ ಕರ್ನಾಟಕ, ಅಸ್ಸಾಂನ 24 ತಬ್ಲೀಘಿಗಳ ವಿರುದ್ಧ ದೂರು ದಾಖಲು

Nagaraja AB

ಶಾಮ್ಲಿ: ಪೊಲೀಸರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದ ಮಸೀದಿಯೊಂದರಲ್ಲಿ ಉಳಿದುಕೊಂಡಿದ್ದ ಕರ್ನಾಟಕ ಹಾಗೂ ಅಸ್ಸಾಂ ಮೂಲದ 24 ತಬ್ಲೀಘಿ ಜಮಾತ್ ಸದಸ್ಯರ ಮೇಲೆ ದೂರು ದಾಖಲಿಸಲಾಗಿದೆ.

ಭಾರತೀಯ ಅಪರಾಧ ಕಾಯ್ದೆ ಮತ್ತು ಸಾಂಕ್ರಾಮಿಕ ಕಾಯಿಲೆ ಕಾಯ್ದೆ1897ರ ಅಡಿಯಲ್ಲಿ 24 ತಬ್ಲೀಘಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಯಶ್ ಪಾಲ್ ಧಾಮ ತಿಳಿಸಿದ್ದಾರೆ.

ಆರೋಪಿಗಳು ಏಪ್ರಿಲ್ 23ರಿಂದ ಕೈರಾನಾ ಪಟ್ಟಣದ  ಪತ್ವಾರಿ ಮಸೀದಿಯಲ್ಲಿರುವುದು ಕಂಡುಬಂದಿದೆ. ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಮುಜಫರ್ ನಗರ ಜಿಲ್ಲೆಯ ನ್ಯೂ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶೆರ್ ನಗರ ಹಳ್ಳಿಯೊಂದರಲ್ಲಿ ಯಾವುದೇ ಮಾಹಿತಿ ನೀಡದೆ ಮಸೀದಿಯೊಂದರಲ್ಲಿ ಉಳಿದಿದ್ದ 10 ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. 

ಐಪಿಸಿ ಸೆಕ್ಷನ್ 188 ಮತ್ತು ಸಾಂಕ್ರಾಮಿಕ ಕಾಯಿಲೆ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೆರ್ ನಗರದಲ್ಲಿದ್ದ 10 ಜನರ ಪೈಕಿಯಲ್ಲಿ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆ ಪ್ರದೇಶವನ್ನು ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದೆ. 

ದೆಹಲಿಯ ನಿಜಾಮುದ್ದೀನ್ ನಿಂದ ಮಾರ್ಚ್ 23 ರಂದು ಹಿಂತಿರುಗಿದ್ದ ಜಮಾತ್ ಸದಸ್ಯರು ಶೆರ್ ನಗರ ಹಳ್ಳಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. 

SCROLL FOR NEXT