ಅಮೆರಿಕ ಮೇಲೆ ಕೋವಿಡ್-19 ದಾಳಿ 9/11 ಗಿಂತ ಭೀಕರವಾದದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕಾದ ಮೇಲೆ ವಿಶ್ವಯುದ್ಧ-II, ಪರ್ಲ್ ಹಾರ್ಬರ್ ಮೇಲೆ ಜಪಾನ್ ಬಾಂಬ್ ದಾಳಿ, 2001 ರಲ್ಲಿ ನಡೆದ 9/11 ದಾಳಿಗಿಂತ ಕೊರೋನಾ ದಾಳಿ ಅತ್ಯಂತ ಭೀಕರವಾದದ್ದು ಎಂದು ಚೀನಾ ವಿರುದ್ಧ ಬೊಟ್ಟು ಮಾಡಿ ಟ್ರಂಪ್ ಆರ್ಫ್ಪ ಮಾಡಿದ್ದಾರೆ. ಅಮೆರಿಕಾದಲ್ಲಿ ಈ ವರೆಗೂ ಕೊರೋನಾಗೆ 1.2 ಮಿಲಿಯನ್ ಜನರು ಸೋಂಕಿತರಾಗಿದ್ದರೆ, 73,000 ಜನರು ಸಾವನ್ನಪ್ಪಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಅತ್ಯಂತ ಕೆಟ್ಟ ದಾಳಿಯನ್ನು ನಾವು ಎದುರಿಸುತ್ತಿದ್ದೇವೆ, ಇದು ಹಿಂದಿನ ಎಲ್ಲಾ ಕೆಟ್ಟ ದಾಳಿಗಳನ್ನೂ ಮೀರಿಸಿದ್ದು, ಈ ರೀತಿಯ ದಾಳಿ ಅಮೆರಿಕಾ ಮೇಲೆ ಈ ವರೆಗೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ.
ಶ್ವೇತ ಭವನದ ಟಾಸ್ಕ್ ಫೋರ್ಸ್ ಕೊರೋನಾ ವೈರಸ್ ತಡೆಗೆ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.