ದೇಶ

ದೇಶದಲ್ಲಿ ಕೊರೋನಾ ಜೂನ್-ಜುಲೈನಲ್ಲಿ ಪೀಕ್ ಗೆ ಹೋಗುವ ಸಾಧ್ಯತೆ: ಏಮ್ಸ್ ನಿರ್ದೇಶಕ

Lingaraj Badiger

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಬರುವ ಜೂನ್-ಜುಲೈನಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಲಿದೆ ಎಂದು ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಅವರು ಗುರುವಾರ ಹೇಳಿದ್ದಾರೆ.

ದೇಶದಲ್ಲಿ ಕೊವಿಡ್-19 ಪ್ರಕರಣಗಳು ಈಗ 50 ಸಾವಿರ ಗಡಿ ದಾಟಿದ್ದು, ಇದರ ಆಧಾರದ ಮೇಲೆ ಮತ್ತು ಮಾಹಿತಿಯ ಪ್ರಕಾರ ಬರುವ ಜೂನ್-ಜುಲೈನಲ್ಲಿ ಕೊರೋನಾ ಹರಡುವಿಕೆ ಪ್ರಮಾಣ ಬಹಳ ಉತ್ತುಂಗಕ್ಕೇರುವ ಸಾಧ್ಯತೆ ಇದೆ ಎಂದಿದ್ದಾರೆ.

ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 52,952 ಪ್ರಕರಣಗಳು ವರದಿಯಾಗಿದ್ದು, 1783 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯುತ್ತಮ ಪರಿಹಾರ ಎಂದರು.

ಕೊರೋನಾ ಬೇಗ ಕೊನೆಗೊಳ್ಳುವುದಿಲ್ಲ. ಹೀಗಾಗಿ ನಾವು ವೈರಸ್ ನೊಂದಿಗೆ ಬದಕಲು ಕಲಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT