ದೇಶ

ಮಹಾರಾಷ್ಟ್ರದಲ್ಲಿ 531 ಪೊಲೀಸರಿಗೆ ಕೊರೊನಾ ಸೋಂಕು

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿ ಈವರೆಗೆ 531 ಮಂದಿ ಪೊಲೀಸರಿಗೆ ಕೊರೋನಾ (ಕೋವಿಡ್-19) ಪಾಸಿಟಿವ್ ಕಂಡುಬಂದಿದ್ದು, ಈ ಪೈಕಿ 39 ಮಂದಿ ಚೇತರಿಸಿಕೊಂಡಿದ್ದಾರೆ.

ಈ ಪೈಕಿ 51 ಮಂದಿ ಪೊಲೀಸ್ ಅಧಿಕಾರಿಗಳಾಗಿದ್ದು, ಉಳಿದ ೪೮೦ ಮಂದಿ ಕಾನ್ಸ್ ಟೇಬಲ್ ಗಳಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಪೊಲೀಸರ ಸಂಖ್ಯೆ ೫ಕ್ಕೆ ಏರಿಕೆಯಾಗಿದೆ. ದೇಶವ್ಯಾಪ್ತಿ ಲಾಕ್ ಡೌನ್ ಜಾರಿಗೊಂಡನಂತರ ಮಹಾರಾಷ್ಟ್ರದಲ್ಲಿ 487 ಮಂದಿಗೆ ಕೊರೊನಾ ವೈರಸ್ ಕಂಡುಬಂದಿದೆ ಎಂದು, ಇದಕ್ಕೂಮುನ್ನ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಟ್ವೀಟ್  ಮಾಡಿದ್ದಾರೆ.

ಇನ್ನೂ ಲಾಕ್ ಡೌನ್ ನಿಬಂಧನೆಗಳನ್ನು ಉಲ್ಲಂಘಿಸಿದ ಮೇಲೆ ಒಟ್ಟು 96, 231 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ದಿನದಿಂದ ಪೊಲೀಸರ ಮೇಲೆ 186 ದಾಳಿಗಳು, ಹಿಂಸಾತ್ಮಾಕ ಘಟನೆಗಳು ನಡೆದಿವೆ. ಈ ಘಟನೆಗಳಿಗೆ ಸಂಬಂಧಿಸಿದಂತೆ 683  ಮಂದಿಯನ್ನು ಬಂಧಿಸಲಾಗಿದೆ. ಇದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ 30 ಮಂದಿ ಆರೋಗ್ಯ ಸಿಬ್ಬಂದಿಗಳ ಮೇಲೂ ದಾಳಿಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT