ವೈದ್ಯನ ಆತ್ಮಹತ್ಯೆ ಪ್ರಕರಣ  ಆಪ್ ಶಾಸಕ ಬಂಧನ 
ದೇಶ

ವೈದ್ಯನ ಆತ್ಮಹತ್ಯೆ ಪ್ರಕರಣ  ಆಪ್ ಶಾಸಕ ಬಂಧನ

ಆಮ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಾಲ್ ರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. 

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಾಲ್ ರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. 

ದಕ್ಷಿಣ ದೆಹಲಿ ದುರ್ಗಾ ವಿಹಾರದಲ್ಲಿ ಕಳೆದ ತಿಂಗಳು ವೈದ್ಯರೊಬ್ಬರು ಆತ್ಮಹತ್ಯೆ ಪ್ರಕರಣದಲ್ಲಿ ಪ್ರಕಾಶ್ ಜರ್ವಾಲ್ ಹಾಗೂ  ಅವರ ಸಹಚರ ಕಪಿಲ್ ನಗರ್ ನನ್ನು, ಕೂಡಾ ಪೊಲೀಸರು ಬಂಧಿಸಿದ್ದಾರೆ. 

ಡಾಕ್ಟರ್ ರಾಜೇಂದ್ರ ಸಿಂಗ್ (52) ಏಪ್ರಿಲ್ 18ರಂದು ದುರ್ಗಾ ವಿಹಾರ್ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅವರು ಬರೆದಿರಿಸಿದ್ದ ಆತ್ಮಹತ್ಯೆ ನೋಟ್ ನಲ್ಲಿ, ತಾನು ಜೀವ ಕಳೆದುಕೊಳ್ಳಲು ಕಾರಣ ಶಾಸಕ ಪ್ರಕಾಶ್ ಎಂದು ಬರೆದಿದ್ದರು. ಇದರಿಂದ ಪ್ರಕಾಶ್ ವಿರುದ್ದ ಪ್ರಕರಣ ದಾಖಲಾಗಿದೆ.  

ಒತ್ತಾಯದ ಹಣ ವಸೂಲಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡಿದೆ ಎಂಬ ಆರೋಪ ಹೊರಿಸಲಾಗಿದೆ. ದೆಹಲಿ  ವಿಧಾನಸಭೆಯ ಸದಸ್ಯರಾಗಿರುವ ಪ್ರಕಾಶ್ ಜರ್ವಾಲ್, ಶುಕ್ರವಾರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಈ ಕುರಿತು ದೆಹಲಿ ಹೈಕೋರ್ಟ್ ಈ ತಿಂಗಳ 11ರಂದು ವಿಚಾರಣೆ ನಡೆಸಲಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT