ದೇಶ

ಉದ್ಯೋಗಿಯೊಬ್ಬರಿಗೆ ಕೊರೋನಾ ದೃಢ: ಏರ್ ಇಂಡಿಯಾ ಪ್ರಧಾನ ಕಚೇರಿ ಸೀಲ್ ಡೌನ್

Manjula VN

ನವದೆಹಲಿ: ಉದ್ಯೋಗಿಯೊಬ್ಬರಲ್ಲಿ ಮಹಾಮಾರಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನ ಸಂಸ್ಥೆ ಏರ್ ಇಂಡಿಯಾ ಕಾರ್ಯಾಲಯವನ್ನು ಸೀಲ್ಡೌನ್ ಮಾಡಲಾಗಿದೆ. 

ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಯನ್ನು ಎರಡು ದಿನಗಳ ತಾತ್ಕಲಿಕವಾಗಿ ಮುಚ್ಚಿದ್ದಾರೆ.

ಜ್ವರ, ಶೀತ, ಕೆಮ್ಮು ಮತ್ತಿತರ ಕೊರೊನಾ ಲಕ್ಷಣ ಹೊಂದಿದ್ದ ಉದ್ಯೋಗಿಯೊಬ್ಬರಿಗೆ ಪರೀಕ್ಷೆಗಳನ್ನು ನಡೆಸಿದಾಗ. ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಐವರು ಏರ್ ಇಂಡಿಯಾ ಪೈಲೆಟ್ ಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು, ಆದರೆ ಅವರಿಗೆ ಸೋಮವಾರ ಸಂಜೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಎಂದು ಕಂಡುಬಂದಿದೆ. ಆದರೂ 14 ದಿನಗಳ ಸ್ವಯಂ ನಿರ್ಬಂಧದಲ್ಲಿ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

SCROLL FOR NEXT