ದೇಶ

ಕೋವಿಡ್-19 ಬಗ್ಗೆ ಹಾನಿಕಾರಕ, ದಾರಿ ತಪ್ಪಿಸುವ ಮಾಹಿತಿಗಳನ್ನು ಗುರುತಿಸುತ್ತಿರುವ ಟ್ವಿಟ್ಟರ್

Sumana Upadhyaya

ನವದೆಹಲಿ:ಕೋವಿಡ್-19ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು, ವದಂತಿಗಳನ್ನು ಹಬ್ಬಿಸುವುದನ್ನು ತಡೆಗಟ್ಟಲು ಅಪಾಯಕಾರಿ ಮತ್ತು ತಪ್ಪು ಮಾಹಿತಿಗಳನ್ನು ಗುರುತಿಸಿ ಟ್ವಿಟ್ಟರ್ ಪಟ್ಟಿ ಮಾಡಲಿದೆ.

ಗೂಗಲ್, ಫೇಸ್ ಬುಕ್ ನಂತಹ ಇತರ ಡಿಜಿಟಲ್ ಮಾಧ್ಯಮಗಳಂತೆ ಟ್ವಿಟ್ಟರ್ ಕೂಡ ಇಂತಹ ಕ್ರಮ ಕೈಗೊಂಡಿದ್ದು ನಂಬಿಕಸ್ಥ ವಿಶ್ವಾಸನೀಯ ಆರೋಗ್ಯ ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯಂತಹ ಸಂಸ್ಥೆಗಳು ಕೊರೋನಾ ವೈರಸ್ ಬಗ್ಗೆ ನೀಡುವ ಸುದ್ದಿಗಳನ್ನು ಮಾತ್ರ ನಂಬಬೇಕು ಎಂದು ಹೇಳಿದೆ.

ಜನರನ್ನು ಹಾದಿ ತಪ್ಪಿಸುವ ಉದ್ದೇಶ ಹೊಂದಿರುವ ಮಾಧ್ಯಮಗಳನ್ನು ಗುರುತು ಮಾಡಿ  ತಿಳಿಸುವ ಕಾರ್ಯವನ್ನು ಟ್ವಿಟ್ಟರ್ ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿತ್ತು. ಇದೀಗ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಕಾಡುತ್ತಿರುವಾಗ ಸಂದರ್ಭದಲ್ಲಿ ಅನೇಕ ತಪ್ಪು ಸುಳ್ಳು ಮಾಹಿತಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಇಂಥ ಸುದ್ದಿಗಳನ್ನು ಗುರುತಿಸಿ ಜನರು ಇಂಥವುಗಳನ್ನು ನಂಬದಂತೆ ಎಚ್ಚರಿಸುವ ಕೆಲಸ ಮಾಡುತ್ತಿವೆ.

ಈ ಬಗ್ಗೆ ಟ್ವಿಟ್ಟರ್ ನಿನ್ನೆ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.

SCROLL FOR NEXT