ದೇಶ

ಎಂಎನ್ ಸಿ ಸೇರಿದಂತೆ ಭಾರತದಲ್ಲಿ ಸಿದ್ಧವಾಗುವ ಎಲ್ಲವೂ ನಮಗೆ ಸ್ವದೇಶಿ: ಬಿಜೆಪಿ ವಕ್ತಾರ

Lingaraj Badiger

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳು(ಎಂಎನ್ ಸಿ) ಸಿದ್ಧಪಡಿಸುವ ವಸ್ತುಗಳು ಸೇರಿದಂತೆ ಭಾರತದಲ್ಲಿ ತಯಾರಿಸುವ ಎಲ್ಲಾ ಉತ್ಪನ್ನಗಳು ನಮಗೆ ಸ್ವದೇಶಿ ವಸ್ತುಗಳಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಗುರುವಾರ ಸ್ಪಷ್ಟನೆ ನೀಡಿದೆ.

ಪ್ರಧಾನಿ ಮೋದಿ ಅವರ ರಾಷ್ಟ್ರೀಯ ಸ್ವಾವಲಂಬನೆ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹರಾವ್ ಅವರು, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಯಾವುದೇ ನಿರ್ದೇಶನವಿಲ್ಲ, ಆದರೆ ದೇಶದಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸುವ ಅಗತ್ಯವನ್ನು ಬಹಳಷ್ಟು ಜನರು ಕಾಣಬಹುದು ಎಂದರು.

ಉದಾಹರಣೆಗೆ, ಭಾರತದಲ್ಲಿ ಎಂಎನ್‌ಸಿ ಸೇರಿದಂತೆ ಅನೇಕ ಕಂಪನಿಗಳು ಶಾಂಪೂ ತಯಾರಿಸುತ್ತಿವೆ. ಅವುಗಳನ್ನು ನಾವು ಸ್ಥಳೀಯ ವಸ್ತುಗಳು ಎಂದು ಹೇಳಬಹುದು. ಸ್ವಾವಲಂಬನೆ ಎಂದರೆ ಕೇವಲ ದೇಶೀಯ ಕಂಪನಿಗಳಿಂದ ತಯಾರಿಸಿದ ಸ್ಥಳೀಯ ಉತ್ಪನ್ನಗಳಲ್ಲ. ಭಾರತದಲ್ಲಿ ನಮಗಾಗಿ ತಯಾರಿಸುವ ಯಾವುದೇ ಉತ್ಪನ್ನ ಅದು ಸ್ಥಳೀಯವಾಗುತ್ತದೆ ಎಂದಿದ್ದಾರೆ.

"ಸ್ಥಳೀಯವಾಗಿ ಏನು ತಯಾರಿಸಿದರೂ, ಅದರಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಮತ್ತು ಈ ಸಂಬಂಧ ಯಾವುದೇ ನಿರ್ದೇಶನ ಸಹ ನೀಡಿಲ್ಲ. ನೀವು ಇದನ್ನು ಖರೀದಿಸಿ ಅಥವಾ ಖರೀದಿಸಬೇಡಿ ಎಂದು ಯಾವುದೇ ನಿರ್ದೇಶನವಿಲ್ಲ, ಇವೆಲ್ಲವೂ ವೈಯಕ್ತಿಕ ನಿರ್ಧಾರಗಳಾಗಿವೆ" ಎಂದು ಅವರು ಹೇಳಿದರು.

ಕೊವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತವು ತನ್ನ ಸ್ವಂತ ಅಗತ್ಯಗಳನ್ನು ಹೇಗೆ ತಯಾರಿಸಬೇಕು ಎಂಬುದನ್ನು ತೋರಿಸಿದೆ, ಆದರೆ ಹೆಚ್ಚಿನ ದೇಶಗಳು ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿವೆ ಎಂದು ರಾವ್ ಹೇಳಿದರು.

SCROLL FOR NEXT