ದೇಶ

ಪಿಎನ್ಬಿ ಹಗರಣದ ಸೂತ್ರಧಾರಿ ನೀರವ್ ಮೋದಿಯನ್ನು 'ರಕ್ಷಿಸಲು' ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ: ರವಿಶಂಕರ್ ಪ್ರಸಾದ್

Raghavendra Adiga

ನವದೆಹಲಿ: ಬ್ರಿಟನ್ ನ್ಯಾಯಾಲಯದಲ್ಲಿ ಭಾರತದ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಮತ್ತೆ ಸ್ವದೇಶಕ್ಕೆ ಹಸ್ತಾಂತರಿಸುವ ಸಂಬಂಧ ವಿಚಾರಣೆ ನಡೆಯುತ್ತಿದೆ. ಈ ನಡುವೆ  ಪರಾರಿಯಾದ ಉದ್ಯಮಿ ನೀರವ್ ಮೋದಿಯನ್ನು  "ಉಳಿಸಲು ಕಾಂಗ್ರೆಸ್ ತನ್ನ ಶತಪ್ರಯತ್ನ" ಮಾಡುತ್ತಿದೆ" ಎಂದು ಬಿಜೆಪಿ ಆರೋಪಿಸಿದೆ.

ಬಂಧಿತ ವಜ್ರ ವ್ಯಾಪಾರಿಯ ರಕ್ಷಣೆ ಮಾಡಲು ಕಾಂಗ್ರೆಸ್ ಯತ್ನಿಸಿದೆ ಎಂದು  ಕಾಂಗ್ರೆಸ್ ಸದಸ್ಯರೂ ಆಗಿರುವ ಮಾಜಿ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆ ಉಲ್ಲೇಖಿಸಿ ಬಿಜೆಪಿ ದೂರಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮುಂಬೈ ಮತ್ತು ಅಲಹಾಬಾದ್ ಹೈಕೋರ್ಟ್‌ಗಳ ಮಾಜಿ ನ್ಯಾಯಾಧೀಶ ಅಭಯ್ ತಿಪ್ಸೆ ನೀರವ್ ಮೋದಿಯವರ ಪರ ವಕೀಲರಂತೆ ವರ್ತಿಸಿದ್ದಾರೆ. ತಿಪ್ಸೆ ಅವರು ಹೇಳುವಂತೆ ನೀರವ್ ಮೋದಿ ವಿರುದ್ಧದ ಬ್ರಿಟನ್ ನಲ್ಲಿ ದಾಖಲಾಗಿರುವ ಮೋಸ ಮತ್ತು ಕ್ರಿಮಿನಲ್ ಪಿತೂರಿ ಆರೋಪಭಾರತೀಯ ಕಾನೂನಿನಡಿಯಲ್ಲಿ ನಿಲ್ಲುವುದಿಲ್ಲ!

2018 ರಲ್ಲಿ ತಿಪ್ಸೆ ಕಾಂಗ್ರೆಸ್ ಸೇರಿದ್ದರು ಮತ್ತು ಪಕ್ಷದ ಉನ್ನತ ನಾಯಕರಾದ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ಅಶೋಕ್ ಚವಾಣ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಉಲ್ಲೇಖಿಸಿದ್ದಾರೆ."ನ್ಯಾಯಾಧೀಶ ತಿಪ್ಸೆತನ್ನ ವೈಯಕ್ತಿಕ ಸಾಮರ್ಥ್ಯದೊಡನೆ ಮಾತನಾಡಿಲ್ಲ, ಕಾಂಗ್ರೆಸ್ಸಿನ ಆಜ್ಞೆಯ ಮೇರೆಗೆ ಈ ಮಾತನ್ನಾಡಿದ್ದಾರೆ. ಅಲ್ಲದೆ ಕಾನೂನು ಕ್ಷೇತ್ರದಲ್ಲಿ ತಿಪ್ಸೆ ಅವರದು ಅಷ್ಟೇನೂ ದೊಡ್ಡ ಹೆಸರಲ್ಲ ಎಂದೂ ರವಿಶಂಕರ್ ಪ್ರಸಾದ್ ಹೇಳಿದ್ದಾರೆ."ನೀರವ್ ಮೋದಿಯನ್ನು ಉಳಿಸಲು ಮತ್ತು ಜಾಮೀನು ನೀಡಲು ಕಾಂಗ್ರೆಸ್ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ನಾವು ಊಹಿಸಬಹುದು. ಇಂತಹಾ ಅನುಮಾನಕ್ಕೆ ಅನೇಕ ಕಾರಣಗಳಿದೆ.  ಆದರೆ ತಿಪ್ಸೆ ಅವರ ಹೇಳಿಕೆಗೆ ಭಾರತೀಯ ತನಿಖಾ ಸಂಸ್ಥೆಗಳು ಪರಿಣಾಮಕಾರಿ ಉತ್ತರ ನೀಡಲಿವೆ "

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆಳ್ವಿಕೆಯಲ್ಲಿ ನೀರವ್ ಮೋದಿ ಭಾರತದಿಂದ ಪಲಾಯನ ಮಾಡಿದ್ದರೂ, ನೀರವ್ ಮೋದಿಯ ಹೆಚ್ಚಿನ ಅಪರಾಧ ಪ್ರಕರಣಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಆಳ್ವಿಕೆಯ ಅವಧಿಗೆ ಸಂಬಂಧಿಸಿದೆ. ನರೇಂದ್ರ ಮೋದಿ ಸರ್ಕಾರವು ಉದ್ಯಮಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ, ಅವುಗಳನ್ನು ಹರಾಜು ಮಾಡಿದೆ ಮತ್ತು ಭಾರತದಲ್ಲಿ ಅವರನ್ನು ನ್ಯಾಯಾಲಯದ ಕಟಕಟೆಗೆ ತರಲು ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 19, 2019 ರಂದು ಸ್ಕಾಟ್ಲೆಂಡ್ ಯಾರ್ಡ್ ಅವರನ್ನು ಬಂಧಿಸುವ ಮೊದಲು ಭಾರತ ಸರ್ಕಾರದಿಂದ ಅವರನ್ನು ದೇಶಕ್ಕೆ ಹಸ್ತಾಂತರಿಸುವ ಮಾಡಿದ್ದು ಇದನ್ನು ಯುಕೆ ಹೋಮ್ ಆಫೀಸ್ ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಮಾಣೀಕರಿಸಿತು ಎಂದು ಸಚಿವರು ವಿವರಿಸಿದ್ದಾರೆ.

ವಜ್ರದ ವ್ಯಾಪಾರಿ ನೀರವ್ ಮೋದಿ ಸಧ್ಯ ನೈಋತ್ಯ ಲಂಡನ್ನಿನ ವಾಂಡ್ಸ್‌ವರ್ತ್ ಜೈಲಿನಲ್ಲಿ ಬಾರ್‌ಗಳ ಹಿಂದೆ ಬಂಧಿಯಾಗಿದ್ದಾರೆ.

SCROLL FOR NEXT