ದೇಶ

ಇಂದು ಸಂಜೆ 4 ಕ್ಕೆ ವಿತ್ತ ಸಚಿವೆ ಮಾದ್ಯಮಗೋಷ್ಠಿ: 20 ಲಕ್ಷ ಕೋಟಿ ರೂ. ಪ್ಯಾಕೇಜ್ ನ ಇನ್ನಷ್ಟು ವಿವರಗಳ ನಿರೀಕ್ಷೆ

Raghavendra Adiga

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದು  ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಭಾಷಣದಲ್ಲಿ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‌ನ ಇನ್ನಷ್ಟು ವಿವರಗಳನ್ನು  ಹಂಚಿಕೊಳ್ಳುವ ನಿರೀಕ್ಷೆಯಿದೆ.

ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಪ್ರಧಾನಿ  ಮಾಡಿದ್ದ ಭಾಷಣದಲ್ಲಿ ಭೂಮಿ, ದ್ರವ್ಯತೆ, ಕಾರ್ಮಿಕ ಮತ್ತು ಕಾನೂನುಗಳನ್ನು ಕೇಂದ್ರೀಕರಿಸಿ ಆತ್ಮ ನಿರ್ಭರ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

ಮಾರ್ಚ್‌ನಲ್ಲಿ ಘೋಷಿಸಲಾದ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಮತ್ತು ಎನ್‌ಬಿಎಫ್‌ಸಿ ಮತ್ತು ಹಣಕಾಸು ವಲಯಕ್ಕೆ ಆರ್‌ಬಿಐ ಘೋಷಿಸಿರುವ ದ್ರವ್ಯತೆ ಕ್ರಮಗಳ ನಂತರದ ಮುಂದುವರಿಕೆಯಾಗಿ ಈ  20 ಲಕ್ಷ ಕೋಟಿ ರೂ. ಪ್ಯಾಕೇಜ್ ಬರುತ್ತಿದೆ.

ವ್ಯಾಪಾರ, ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ ಮತ್ತು ದೊಡ್ಡ ಕೈಗಾರಿಕಾ ಘಟಕಗಳ ಸಂಕಷ್ಟದ ಕಾರಣ ಲಾಕ್‌ಡೌನ್‌ನ ತೀವ್ರತೆಯನ್ನು ಭರಿಸಲು ಸಣ್ಣ, ಮದ್ಯಮ ಕೈಗಾರಿಕೆ ವಲಯಕ್ಕೆ ಹಣಕಾಸು ಸಚಿವರು ಪ್ಯಾಕೇಜ್ ಘೋಷಿಸಿದ್ದಾರೆ. 

SCROLL FOR NEXT