ದೇಶ

ಮೇ 22ರಿಂದ ವಿಶೇಷ ರೈಲುಗಳಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್ ಸೇವೆ ಲಭ್ಯ: ಇನ್ನಷ್ಟು ರೈಲು ಸಂಚಾರ ಸಾಧ್ಯತೆ

Sumana Upadhyaya

ನವದೆಹಲಿ: ವಿಶೇಷ ರೈಲುಗಳಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್ ಸೌಲಭ್ಯವನ್ನು ಕೂಡ ರೈಲ್ವೆ ಇಲಾಖೆ ಆರಂಭಿಸಲಿದೆ.

ಪ್ರಸ್ತುತ ರೈಲ್ವೆ ಇಲಾಖೆ ಹೊರಡಿಸಿರುವ ವಿಶೇಷ ರೈಲುಗಳಲ್ಲಿ ಕೇವಲ ದೃಢಪಡಿಸಿರುವ ಟಿಕೆಟ್ ಗಳನ್ನು ಮಾತ್ರ ಬುಕ್ಕಿಂಗ್ ಮಾಡಲಾಗುತ್ತದೆ. ಇದರ ಜೊತೆಗೆ ನಾಳೆಯಿಂದ ಆರಂಭವಾಗುವ ಟಿಕೆಟ್ ಬುಕ್ಕಿಂಗ್ ಪ್ರಯಾಣ ಮೇ 22ರಂದು ಆರಂಭವಾಗಲಿದ್ದು ಅದರಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಕೂಡ ಆರಂಭಿಸಲಿದೆ.

ಪ್ರಸ್ತುತ ಕೇವಲ ಹವಾ ನಿಯಂತ್ರಿತ ಬೋಗಿಗಳು ಮಾತ್ರ ಇದ್ದು, ಇನ್ನು ಮುಂದೆ ಮಿಶ್ರ ಸೇವೆಗಳನ್ನು ಕೂಡ ಆರಂಭಿಸಲಿದೆ ಎಂದು ರೈಲ್ವೆ ಮಂಡಳಿ ವಲಯಗಳಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ನಗರಗಳಿಗೆ ಮಾತ್ರವಲ್ಲದೆ ಇನ್ನು ಮುಂದೆ ಪಟ್ಟಣಗಳಿಗೆ ಸಹ ರೈಲನ್ನು ಸಂಚರಿಸುವ ಬಗ್ಗೆ ಇಲಾಖೆ ಗಮನಹರಿಸುತ್ತಿದೆ.

ಆದರೆ ತತ್ಕಾಲ್, ಪ್ರೀಮಿಯಂ ತತ್ಕಾಲ್ ಸೇವೆ ಅಥವಾ ಹಿರಿಯ ನಾಗರಿಕರ ಖೋಟಾ ಈ ರೈಲುಗಳಲ್ಲಿ ಸಿಗುವುದಿಲ್ಲ. ಆರ್ ಎಸಿ ಕೂಡ ಸಿಗುವುದಿಲ್ಲ. ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರಿಗೆ ಪ್ರಯಾಣಕ್ಕೆ ಅನುಮತಿ ಕೊಡುವುದಿಲ್ಲ. ಅವರ ಟಿಕೆಟ್ ಹಣವನ್ನು ಸಂಪೂರ್ಣವಾಗಿ ನೀಡಲಾಗುತ್ತದೆ.

SCROLL FOR NEXT