ದೇಶ

ಲಾಕ್ ಡೌನ್: ವಿವಿಧೆಡೆ ಸಿಲುಕಿದ್ದ 14 ಲಕ್ಷಕ್ಕೂ ಹೆಚ್ಚು ಜನರನ್ನು ಸ್ವಂತ ಸ್ಥಳಗಳಿಗೆ ತಲುಪಿಸಿದ ರೈಲ್ವೆ

Lingaraj Badiger

ನವದೆಹಲಿ: ಕಳೆದ 15 ದಿನಗಳಲ್ಲಿ ಭಾರತೀಯ ರೈಲ್ವೆ ಕೊವಿಡ್-19 ಲಾಕ್ ಡೌನ್ ಪರಿಣಾಮ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ 14 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಸ್ವಂತ ಸ್ಥಳಗಳಿಗೆ ತಲುಪಿಸಿದೆ.

ಮೇ 15ರ ಮಧ್ಯರಾತ್ರಿವರೆಗೆ ದೇಶದ ವಿವಿಧ ಭಾಗಗಳಿಂದ 1,074 ಶ್ರಮಿಕ್‍ ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಿವೆ.

ಕಳೆದ 15 ದಿನಗಳಲ್ಲಿ ದೇಶದ ವಿವಿಧೆಡೆ ಸಿಲುಕಿದ್ದ 14 ಹೆಚ್ಚು ಜನರನ್ನು ಅವರ ಸ್ವಂತ ಸ್ಥಳಗಳಿಗೆ ಸಾಗಿಸಲಾಗಿದೆ. ಕಳೆದ ಮೂರು ದಿನಗಳಲ್ಲೇ ಸುಮಾರು ಎರಡು ಲಕ್ಷ ಜನರು ಪ್ರಯಾಣಿಸಿದ್ದಾರೆ. ಮುಂದಿನ ದಿನಗಳಲ್ಲಿ ದಿನಕ್ಕೆ ಮೂರು ಲಕ್ಷ ಜನರನ್ನು ಸಾಗಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರು ತೆರಳುವ ಮತ್ತು ತಲುಪುವ ರಾಜ್ಯಗಳ ಒಪ್ಪಿಗೆ ಪಡೆದ ನಂತರಷ್ಟೇ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈ 1,074 ಶ್ರಮಿಕ್‍ ವಿಶೇಷ ರೈಲುಗಳು ಆಂಧ್ರಪ್ರದೇಶ, ದೆಹಲಿ, ಗುಜರಾತ್‍, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್‍, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಗೋವಾ, ಜಾರ್ಖಂಡ್‍, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ತೆರಳಿವೆ.

ವಿಶೇಷ ರೈಲುಗಳು ಆಂಧ್ರಪ್ರದೇಶ, ಬಿಹಾರ, ಚತ್ತೀಸ್‍ಗಢ, ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ, ಜಾರ್ಖಂಡ್‍, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಒಡಿಶಾ, ರಾಜಸ್ಥಾನ, ತಮಿಳುನಾಡು, ತ್ರಿಪುರಾ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ತಲುಪಿವೆ.

SCROLL FOR NEXT