ದೇಶ

ಮೇ 31 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಪಂಜಾಬ್, ಕರ್ಫ್ಯೂ ನಿರ್ಬಂಧ ತೆರವು 

Raghavendra Adiga

ಅಮೃತಸರ: ಪಂಜಾಬ್ ರಾಜ್ಯದಲ್ಲಿ ಕೊರೋನಾವೈರಸ್ ಲಾಕ್ ಡೌನ್ ಮೇ 31 ರವರೆಗೆ ಮುಂದುವರಿಯುತ್ತದೆ ಆದರೆ ಸರ್ಕಾರ ಕರ್ಫ್ಯೂ ನಿರ್ಬಂಧವನ್ನು ತೆಗೆದುಹಾಕುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಹೇಳಿದ್ದಾರೆ.

"ಮೇ 18 ರಿಂದ ರಾಜ್ಯದಲ್ಲಿ ಯಾವುದೇ ಕರ್ಫ್ಯೂ ಇರುವುದಿಲ್ಲ. ಆದರೆ ಮೇ 31 ರವರೆಗೆ ಲಾಕ್ ಡೌನ್ ಇರುತ್ತದೆ" ಎಂದು ಮುಖ್ಯಮಂತ್ರಿ ಸಿಂಗ್ ಹೇಳಿದರು.

ಮೇ 18 ರಿಂದ ಸೀಮಿತ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂಬ  ಸೂಚನೆ ನೀಡಿರುವ ಸಿಂಗ್ ರಾಜ್ಯ ಸರ್ಕಾರವು ಮೇ 18 ರಿಂದ ಹೆಚ್ಚಿನ ವಿನಾಯಿತಿ  ನೀದಲಿದೆ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ಕೊರೋನಾಹರಡದಂತೆ ತಡೆಗೆ ಸಾರ್ವಜನಿಕರ ಬೆಂಬಲ ಕೋರಿದ್ದಾರೆ.ಮೇ 18 ರಿಂದ ಗರಿಷ್ಠ ಅಂಗಡಿಗಳು ಮತ್ತು ಸಣ್ಣ ಉದ್ಯಮಗಳನ್ನು ತೆರೆಯಲು ನಾನು ಅವಕಾಶ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಿರಲಿದೆ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.

SCROLL FOR NEXT