ದೇಶ

ವಲಸೆ ಕಾರ್ಮಿಕರನ್ನು ಭೇಟಿಯಾದ ರಾಹುಲ್, ತವರಿಗೆ ಮರುಳಿಸಲು ವಾಹನ ವ್ಯವಸ್ಥೆ!

Vishwanath S

ನವದೆಹಲಿ: ದೆಹಲಿಯ ಸುಖದೇವ್ ವಿಹಾರ್ ಪ್ರದೇಶದ ಫ್ಲೈಓವರ್ ಬಳಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರ ಗುಂಪನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾದರು.

ಪಾದಚಾರಿ ಮಾರ್ಗದಲ್ಲಿ ಕುಳಿತು ಕಾರ್ಮಿಕರು ಮತ್ತು ಅವರ ಕುಟುಂಬಗಳೊಂದಿಗೆ ರಾಹುಲ್ ಗಾಂಧಿ ಮಾತನಾಡುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನಂತರ ದೆಹಲಿ ಪೊಲೀಸರು ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಈ ಆರೋಪಗಳನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಬಂದು ವಲಸಿಗರೊಂದಿಗೆ ಸಂವಹನ ನಡೆಸಿದರು ಎಂದು ಅಪರಿಚಿತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಂತರ ಅವರ ಬೆಂಬಲಿಗರು ವಲಸಿಗರನ್ನು ತಮ್ಮ ವಾಹನಗಳಲ್ಲಿ ಕರೆದೊಯ್ದರು." ಏತನ್ಮಧ್ಯೆ, ಸಾಮಾಜಿಕ ಅಂತರ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ನೀಡುವ ವಾಹನವನ್ನು ಹತ್ತಲು ವಲಸಿಗರಿಗೆ ಅವಕಾಶವಿಲ್ಲ ಎಂದು ಅಪರಿಚಿತ ಪೊಲೀಸ್ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಲಸೆ ಕಾರ್ಮಿಕರು ತಮ್ಮ ತವರಿಗೆ ತಲುಪುವ ಹತಾಶ ಪ್ರಯತ್ನದಲ್ಲಿ ದೀರ್ಘ ಪ್ರಯಾಣವನ್ನು ಕೈಗೊಳ್ಳುವುದರಿಂದ ಅವರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ರಾಹುಲ್ ಗಾಂಧಿಯವರು ನಮ್ಮ ತೊಂದರೆಗಳ ಬಗ್ಗೆ ವಿಚಾರಿಸಿದರು ಎಂದು ಗುಂಪಿನ ಭಾಗವಾಗಿದ್ದ ಮಹೇಶ್ ಕುಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. "ನಮಗೆ ತಿನ್ನಲು ಆಹಾರ ಸಿಗುತ್ತಿಲ್ಲ ಎಂದು ರಾಹುಲ್ ಅವರಿಗೆ ತಿಳಿಸಿದೆ. ಕೆಲಸವಿಲ್ಲದೆ 50 ದಿನಗಳು ಕಳೆದಿವೆ ಎಂದಾಗ ಅದರ ಬಗ್ಗೆ ಏನಾದರೂ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು ಎಂದು ಹೇಳಿದ್ದಾರೆ.

SCROLL FOR NEXT