ದೇಶ

ಮಹಾರಾಷ್ಟ್ರದಲ್ಲಿ 30,000 ದಾಟಿದ ಕೊರೋನಾ ಸೋಂಕು ಪ್ರಕರಣಗಳು, ಮುಂಬೈ ಒಂದರಲ್ಲೇ 18,500 ಪ್ರಕರಣ

Srinivasamurthy VN

ಮುಂಬೈ: ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರ ಗಡಿ ದಾಟಿದ್ದು, ವಾಣಿಜ್ಯ ನಗರಿ ಮುಂಬೈವೊಂದರಲ್ಲೇ ಸೋಂಕಿತರ ಸಂಖ್ಯೆ ಬರೊಬ್ಬರಿ 18,500ಕ್ಕೆ ಏರಿಕೆಯಾಗಿದೆ.

ಹೌದು.. ಮಹಾರಾಷ್ಟ್ರದಲ್ಲಿ ಕೇವಲ 24 ಗಂಟೆಗಳಲ್ಲಿ 1,606 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 30,000 ದಾಟಿದೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ, ಒಂದು ದಿನದಲ್ಲಿ ಈ ಸೋಂಕಿನಿಂದ 67 ಜನರು ಸಾವನ್ನಪ್ಪಿದ್ದು,.ಮುಂಬೈ  ಮಹಾನಗರಿಯೊಂದರಲ್ಲೇ ಸೋಂಕಿತರ ಸಂಖ್ಯೆ 18,555 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಶನಿವಾರ ಒಂದೇ ದಿನ 884 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 41 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದಂತೆ ಪುಣೆಯಲ್ಲಿ ಏಳು, ಥಾಣೆ ನಗರದಲ್ಲಿ ಏಳು, ಔರಂಗಾಬಾದ್  ನಗರದಲ್ಲಿ ಐದು, ಜಲ್ಗಾಂವ್ನಲ್ಲಿ ಮೂರು, ಮೀರಾ-ಭಾಯಂದರ್ನಲ್ಲಿ ಎರಡು ಮತ್ತು ನಾಸಿಕ್ ಮತ್ತು ಸೋಲಾಪುರದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಒಟ್ಟಾರೆಯಾಗಿ ಕೊರೋನಾ ವೈರಸ್ ಗೆ ಮಹರಾಷ್ಟ್ರದಲ್ಲಿ ಬಲಿಯಾದವರ ಸಂಖ್ಯೆ 696ಕ್ಕೆ ಏರಿಕೆಯಾಗಿದೆ. 

ಅಂತೆಯೇ ಶನಿವಾರ ಮಹಾರಾಷ್ಟ್ರದಲ್ಲಿ 524 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮುಂಬೈನಲ್ಲಿ 238 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 7,088ಕ್ಕೆ ಏರಿಕೆಯಾಗಿದೆ. ಇದಲ್ಲದೆ  ಮಹಾರಾಷ್ಟ್ರದಲ್ಲಿ ಈಗ 22,479 ಸಕ್ರಿಯ ಪ್ರಕರಣಗಳಿವೆ.

SCROLL FOR NEXT