ದೇಶ

ಭಾರತೀಯ ಕೊ-ಆಪರೇಟೀವ್ ಬ್ಯಾಂಕ್ ಗಳಿಗೆ ಟ್ರೋಜನ್ ಮಾಲ್ವೇರ್ ದಾಳಿ! 

Srinivas Rao BV

ನವದೆಹಲಿ: ಭಾರತೀಯ ಕೋ-ಆಪರೇಟೀವ್ ಬ್ಯಾಂಕ್ ಗಳ ಮೇಲೆ ಟ್ರೋಜನ್ ಮಾಲ್ವೇರ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಸೈಬರ್ ಭದ್ರತಾ ಸಂಶೋಧಕರು ಎಚ್ಚರಿಸಿದ್ದಾರೆ.

ಐಟಿ ಭದ್ರತಾ ಸಂಸ್ಥೆ ಕ್ವಿಕ್ ಹೀಲ್ ಟೆಕ್ನಾಲಜಿಯ ಅಂಗ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಆಡ್ವಿಂಡ್ ಜಾವಾ ರಿಮೋಟ್ ಆಕ್ಸಿಸ್ ಟ್ರೋಜನ್(ಆರ್ ಎಟಿ) ಅಭಿಯಾನವನ್ನು ಬೆಳಕಿಗೆ ತಂದಿದೆ. ಇಲ್ಲಿನ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ವೇಳೆ ದಾಳಿಕೋರರು ಯಶಸ್ವಿಯಾದಲ್ಲಿ ಗ್ರಾಹಕರ ಮಾಹಿತಿ ಸೇರಿದಂತೆ ಪ್ರಮುಖ ಡೇಟಾಗಳನ್ನು ಕದಿಯಬಹುದು, ಈ ಮೂಲಕ ಆರ್ಥಿಕ ವಂಚನೆಗಳು ನಡೆಯಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 

SCROLL FOR NEXT