ದೇಶ

ಕೊರೋನಾ ಮರಣ ಮೃದಂಗ: ದೇಶದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ  0.2ರಷ್ಟು ಮಂದಿ ಕೋವಿಡ್ ಗೆ ಬಲಿ

Raghavendra Adiga

ನವದೆಹಲಿ: ಭಾರತವು ಇಲ್ಲಿಯವರೆಗೆ ಪ್ರತಿ ಲಕ್ಷ ಜನಸಂಖ್ಯೆಗೆ 0.2ರಷ್ಟು ಕೋವಿಡ್ 19 ಸಾವಿನ ಪ್ರಕರಣವನ್ನು ಕಂಡಿದೆ ಎಂದು ಜಾಗತಿಕ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಕೊರೋನಾವೈರಸ್ ಸೋಂಕಿನಿಂದಾಗಿ ಸತ್ತವರ ಸಂಖ್ಯೆ ಮಂಗಳವಾರದವರೆವಿಗೆ 3,163 ಕ್ಕೆ ತಲುಪಿದೆ. ಒಟ್ತೂ ಸೋಂಕಿತರ ಸಂಖ್ಯೆ 1,01,139ಕ್ಕೆ ಏರಿಕೆಯಾಗಿದೆ.

ಅಲ್ಲದೆ, ದೇಶದಲ್ಲಿ ಸೋಮವಾರ  ದಾಖಲೆಯ 1,08,233 ಕೋವಿಡ್ -19  ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟು 24,25,742 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಡಬ್ಲ್ಯುಎಚ್‌ಒ ಸಿಚುವೇಷನ್ ರಿಪೋರ್ಟ್  -119 ರ ದತ್ತಾಂಶವನ್ನು ಉಲ್ಲೇಖಿಸಿ ಸಚಿವಾಲಯವು ವಿಶ್ವಾದ್ಯಂತ ಮಂಗಳವಾರದವರೆಗೆ 3,11,847 ಕೋವಿಡ್ -19 ಸಾವುಗಳು ವರದಿಯಾಗಿವೆ, ಇದು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 4.1 ಶೇ. ಆಗಲಿದೆ ಎಂದಿದೆ.

ಹೆಚ್ಚಿನ ಕೋವಿಡ್ -19 ಸಾವುನೋವು ಹೊಂದಿರುವ ದೇಶಗಳಲ್ಲಿ, 87,180  ಸಾವು ಜನಸಂಖ್ಯೆಗೆ ಸಂಭವಿಸಿರುವ ಯುನೈಟೆಡ್ ಸ್ಟೇಟ್ಸ್ ಪ್ರತಿ ಲಕ್ಷ ಜನಸಂಖ್ಯೆಗೆ 26.6 ರಷ್ಟು ಸಾವನ್ನು ಕಂಡಿದೆ.ಯುನೈಟೆಡ್ ಕಿಂಗ್‌ಡಮ್ 34,636 ಸಾವುಗಳನ್ನು ವರದಿ ಮಾಡಿದೆ ಮತ್ತು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 52.1 ಸಾವಿನ ಪ್ರಕರಣ ಹೊಂದಿದೆ. ಕೊರೋನಾ ಸಾವಿನ 31,908 ನಿದರ್ಶನಗಳನ್ನು ಹೊಂದಿರುವ ಇಟಲಿಯಲ್ಲಿ ಇದುವರೆಗೆ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 52.8 ಸಾವು ಸಂಭವಿಸಿದ್ದರೆ ಫ್ರಾನ್ಸ್ ಇದುವರೆಗೆ 28,059 ಸಾವುನೋವುಗಳನ್ನು ವರದಿ ಮಾಡಿದ್ದು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 41.9, 7, 650 ಸಾವುನೋವುಗಳೊಂದಿಗೆ ಸ್ಪೇನ್ ಒಂದು ಲಕ್ಷಕ್ಕೆ 59.2 ಸಾವಿನ ಘಟನೆಯನ್ನು ಕಂಡಿದೆ.

ಕೋವಿಡ್ -19 ಕಾರಣದಿಂದಾಗಿ ಇದುವರೆಗೆ 4,645 ಸಾವುನೋವುಗಳನ್ನು ದಾಖಲಿಸಿದ ಚೀನಾ, ಇದುವರೆಗೆ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 0.3 ಸಾವನ್ನು ವರದಿ ಮಾಡಿದೆ. 

ಭಾರತದಲ್ಲಿ ಎಲ್ಲಾ ಕೇಂದ್ರ ಸರ್ಕಾರಿ ಪ್ರಯೋಗಾಲಯಗಳು, ರಾಜ್ಯ ವೈದ್ಯಕೀಯ ಕಾಲೇಜುಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಲಯದೊಂದಿಗೆ ಸಹಭಾಗಿತ್ವ ಸಾಧಿಸಿದ ಕಾರಣ ದೇಶದಲ್ಲಿ ಕೋವಿಡ್ ರೀಕ್ಷಾ ಸಾಮರ್ಥ್ಯವನ್ನು ವಿಸ್ತರಿಸಲಾಗಿದೆ" ಎಂದು ಸಚಿವಾಲಯ ತಿಳಿಸಿದೆ. 

SCROLL FOR NEXT