ದೇಶ

ಲಾಕ್ ಡೌನ್: 56 ದಿನಗಳ ನಂತರ ಬಂಗಾಳದಿಂದ ಹಿಮಾಚಲ ಪ್ರದೇಶಕ್ಕೆ ಮರಳಿದ ಮದುವೆ ದಿಬ್ಬಣ!

Vishwanath S

ಶಿಮ್ಲಾ: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ 56 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಸಿಲುಕಿದ್ದ ಮದುವೆಯ ದಿಬ್ಬಣವೊಂದು ಇದೀಗ ಹಿಮಾಚಲ ಪ್ರದೇಶಕ್ಕೆ ಮರಳಿದೆ. 

ಮಾರ್ಚ್ 21ರಂದು 17 ಮಂದಿಯ ಮದುವೆ ದಿಬ್ಬಣ ಗುರ್ಮುಖಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಕೊಲ್ಕತ್ತಾಗೆ ಮಾರ್ಚ್ 22ರಂದು ಬಂದು ತಲುಪಿದ್ದರು. ಮಾರ್ಚ್ 22ರಂದು ಕೊರೋನಾ ಹರಡುವುದನ್ನು ತಪ್ಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂ ಘೋಷಿಸಿದ್ದರು. ಹೀಗಾಗಿ ನಾವು ಲಾಕ್ ಡೌನ್ ನಲ್ಲಿ ಸಿಲುಕಿಕೊಂಡೆವು ಎಂದು ಮದುಮಗ 30 ವರ್ಷದ ಸುನೀಲ್ ಕುಮಾರ್ ಹೇಳಿದ್ದಾರೆ. 

ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮೊದಲ ಹಂತ ಪ್ರಾರಂಭವಾದ ದಿನವಾದ ಮಾರ್ಚ್ 25ರಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕಾಶಿಪುರ ಗ್ರಾಮದಲ್ಲಿ ಸಂಜೋಗಿತಾ ಅವರೊಂದಿಗಿನ ಸುನೀಲ್ ಕುಮಾರ್ ಅವರ ವಿವಾಹವನ್ನು ನಿಗದಿಪಡಿಸಲಾಗಿತ್ತು.

ವಧುವಿನೊಂದಿಗೆ ಮಾರ್ಚ್ 26 ರಂದು ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧವಾಗಿತ್ತು ಮತ್ತು ಅದಾಗಲೇ ಟಿಕೆಟ್ಗಳನ್ನು ಕಾಯ್ದಿರಿಸಲಾಗಿತ್ತು. ಆದರೆ ರೈಲು ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಸಂಪೂರ್ಣ ಲಾಕ್‌ಡೌನ್ ಎಂದರೆ ಮುಂದಿನ 50 ದಿನಗಳವರೆಗೆ ಇದು ಧರ್ಮಶಾಲಾದಲ್ಲಿ ಇರಬೇಕಾಗಿತ್ತು.

ಕುಮಾರ್ ಅವರ ಮಾವ ಕಾಶಿಪುರ ಧರ್ಮಶಾಲಾದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.

"ನಾವು ಪಶ್ಚಿಮ ಬಂಗಾಳದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ, ನಾವು ಹಿಮಾಚಲ ಪ್ರದೇಶದ ಸಚಿವ ವೀರೇಂದ್ರ ಕನ್ವರ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ನಮಗೆ ಪಡಿತರವನ್ನು ಸಿಗುವಂತೆ ಮಾಡಿದ್ದರು. ಎಂದು ಎಲೆಕ್ಟ್ರಿಷಿಯನ್ ಕುಮಾರ್ ಹೇಳಿದರು.

ಮೇ 14 ರಂದು ರಾಜ್ಯ ಸರ್ಕಾರದಿಂದ ಇ-ಪಾಸ್ ಪಡೆದ ನಂತರ ಹಿಮಾಚಲ ಪ್ರದೇಶಕ್ಕೆ ಮಾಲ್ಡಾದಲ್ಲಿ "ದಿಬ್ಬಣ" ಬಸ್ ಹತ್ತಿದಾಗ ಅಗ್ನಿಪರೀಕ್ಷೆ ಕೊನೆಗೊಂಡಿತು ಎಂದು ಹೇಳಿದ್ದಾರೆ. 

SCROLL FOR NEXT