ದೇಶ

ತಿರುಮಲದ ಭಕ್ತರಿಗೆ ಶುಭಸುದ್ದಿ! ಚೆನ್ನೈ, ಬೆಂಗಳೂರು, ಹೈದರಾಬಾದ್ ಗಳಲ್ಲಿ ಪವಿತ್ರ ಲಡ್ಡು ಪ್ರಸಾದ ಶೀಘ್ರ ಲಭ್ಯ

Raghavendra Adiga

ತಿರುಪತಿ: ಕೊರೋನಾವೈರಸ್ ಲಾಕ್‌ಡೌನ್ ಹೊರತಾಗಿಯೂ, ತಿರುಮಲ ವೆಂಕಟೇಶ್ವರನ ಭಕ್ತಾದಿಗಳು  ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಪವಿತ್ರ 'ಲಡ್ಡು ಪ್ರಸಾದಗಳನ್ನು ಪಡೆಯಲಿದ್ದಾರೆ ಎಂದು ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ಹೇಳಿದ್ದಾರೆ. 

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 20 ರಿಂದ ಬೆಟ್ಟದ ಮೇಲಿನ ಭಗವಾನ್ ವೆಂಕಟೇಶ್ವರ ದರ್ಶನ ನಿರ್ಬಂಧಿಸಲ್ಪಟ್ಟಿದೆ. ಇದರಿಂದ ಭಕ್ತರು ತೀವ್ರ ನಿರಾಶರಾಗಿದ್ದು ಲಡ್ಡು ಪ್ರಸಾದಕ್ಕಾಗಿ ಪದೇ ಪದೇ ಬೇಡಿಕೆ ಬಂದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

ತಿರುಪತಿ ಲಡ್ಡು ಆಯಾ ಸ್ಥಳಗಳಿಗೆ ಆಗಮಿಸುವ ದಿನಾಂಕವನ್ನು ಮೂರು ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು, ಇದೇ ಅಲ್ಲದೆ ನಿರ್ದಿಷ್ಟ ಪ್ರದೇಶಗಳಲ್ಲಿ ಇತರ ಭಕ್ತರಿಗೆ ಉಚಿತ ವಿತರಣೆಗಾಗಿ ಹೆಚ್ಚಿನ ಲಾಡುಗಳನ್ನು ಖರೀದಿಸಲು ಬಯಸುವ ಭಕ್ತರು 9849575952 ಸಂಖ್ಯೆಯ ಮೂಲಕ ಉಪ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಬಹುದು.  ಪೊಟು ಪೀಷ್ಕರ್ (Potu Peishkar) ೯9701092777. 

ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ ಭಕ್ತರಿಗೆ ಉಡುಗೊರೆಯಾಗಿ ಟೋಕನ್ ರೂಪದಲ್ಲಿ ತಲಾ 50 ರೂ.ಗಳ ಬೆಲೆಯ ಲಾಡುವನ್ನು 25 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದರು. ಈ ಪ್ರದೇಶಗಳಲ್ಲಿ ಟಿಟಿಡಿ ಮಾಹಿತಿ ಕೇಂದ್ರಗಳು ಮತ್ತು ಟಿಟಿಡಿ ಮದುವೆ ಸಭಾಂಗಣಗಳಲ್ಲಿ ಲಾಡು ಪ್ರಸಾದ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಭಕ್ತರ ಇ-ಹುಂಡಿ ನಗದು ಕೊಡುಗೆಗಳು ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆಯ ಆದಾಯ 1.97 ಕೋಟಿ ರೂ. ಗಳಿಸಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ 1.79 ಕೋಟಿ ರೂ. ಇದ್ದು ಈ ವರ್ಷ 18 ಲಕ್ಷ ರೂ.ಗಳ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಟಿಟಿಡಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಟಿಟಿಡಿ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ರೆಡ್ಡಿ ನಿರಾಕರಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಸಂಬಳ ನೀಡಲಾಗುತ್ತಿದ್ದು, ಮೇ ಮತ್ತು ಜೂನ್‌ಗೂ ನೀಡಲಾಗುವುದು ಎಂದು ಅವರು ಹೇಳಿದರು. 

SCROLL FOR NEXT