ದೇಶ

ಶೀಘ್ರದಲ್ಲೇ ಪಿಒಕೆನಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ: ಶಾಹಿದ್ ಅಫ್ರಿದಿಗೆ ಯುಪಿ ಸಚಿವ ಆನಂದ್ ಸ್ವರೂಪ್ ತಿರುಗೇಟು

Lingaraj Badiger

ಬಲ್ಲಿಯಾ: ಶೀಘ್ರದಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು, ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅನಗತ್ಯೆ ಹೇಳಿಕೆಗಳನ್ನು ನೀಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ ತಿರುಗೇಟು ನೀಡಿದ್ದಾರೆ.

"ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತದ ಭಾಗವಾಗಲಿದೆ ಮತ್ತು ಅಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜ ಹಾರಾಡಲಿದೆ" ಎಂದು ಶುಕ್ಲಾ ಹೇಳಿದ್ದಾರೆ.

ಕಾಶ್ಮೀರಿಗಳ ಸಂಕಟವನ್ನು ಧಾರ್ಮಿಕ ನಂಬಿಕೆಗಳಿಂದ ನಿವಾರಿಸಲು ಸಾಧ್ಯವಿಲ್ಲ, ಸೂಕ್ತ ಸ್ಥಳದಲ್ಲಿ ಸೂಕ್ತ ಹೃದಯವಂತರಿಂದ ಮಾತ್ರ ಸಾಧ್ಯ, ಕಾಶ್ಮೀರ ರಕ್ಷಿಸಿ ಎಂಬರ್ಥದಲ್ಲಿ ಶಾಹೀದ್ ಅಫ್ರಿದಿ ಇತ್ತೀಚಿಗೆ ಟ್ವೀಟ್ ಮಾಡಿದ್ದರು. 

ಈ ಕುರಿತು ಪ್ರತಿಕ್ರಿಯಿಸಿದ ಅಫ್ರಿದಿ, "ಭಾರತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಶಾಹಿದ್ ಅಫ್ರಿದಿಯಂತಹವರಿಗೆ ನಾನು ಹೇಳಲು ಬಯಸುತ್ತೇನೆ, ಇದು ಸರ್ಜಿಕಲ್ ಸ್ಟ್ರೈಕ್ ನಡೆಸಿದ ನರೇಂದ್ರ ಮೋದಿಯವರ ಸರ್ಕಾರ" ಎಂದು ಹೇಳುವ ಮೂಲಕ ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ಗಡಿಯಾಚೆಗಿನ ದಾಳಿಯನ್ನು ಉಲ್ಲೇಖಿಸಿದ್ದಾರೆ.

ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಮತ್ತು ದೇಶಕ್ಕೆ ಬಂದೂಕುಗಳನ್ನು ತೋರಿಸುವವರನ್ನು "ನಮ್ಮ ಸೈನ್ಯ ತೆಗೆದುಹಾಕುತ್ತದೆ" ಎಂದು ಸಚಿವರು ಹೇಳಿದ್ದಾರೆ.

SCROLL FOR NEXT