ದೇಶ

ವಧುವಿಗೆ ಕೊರೋನಾ ಪಾಸಿಟಿವ್, ಆತಂಕದ ನಡುವೆ ನೆರವೇರಿದ ಮದುವೆ, 28 ಮಂದಿ ಕ್ವಾರಂಟೈನ್!

Vishwanath S

ಸೇಲಂ: ಮದುವೆ ಈ ವಿಶೇಷ ದಿನಕ್ಕಾಗಿ ಐದು ತಿಂಗಳು ಕಾಯುತ್ತಿದ್ದರು. 300 ಕಿ.ಮೀ ಪ್ರಮಾಣಿಸಿದ ನಂತರ ತಿಳಿಯಿತು ವಧುವಿಗೆ ಕೊರೋನಾ ಸೋಂಕು ತಗುಲಿರುವುದು. ಅತ್ತ ಕ್ವಾರಂಟೈನ್ ಆಗಬೇಕಾ ಅಥವಾ ಮದುವೆ ಮಾಡಿಸಬೇಕಾ ಎಂಬ ಗೊಂದಲದಲ್ಲಿ ಪೋಷಕರಿದ್ದರು. 

ವಿಲ್ಲುಪುರಂ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಧು ಮೂರು ಜಿಲ್ಲೆಗಳನ್ನು ದಾಟಿದ ನಂತರ ಗುರುವಾರ ರಾತ್ರಿ ಗಡಿ ಪಟ್ಟಣವಾದ ತಲೈವಾಸಲ್ ತಲುಪಿದ್ದಾರೆ. ಕೊರೋನಾ ಮಾರ್ಗಸೂಚಿ ಪ್ರಕಾರ, ಆರೋಗ್ಯ ಅಧಿಕಾರಿಗಳು ವಧುವಿನ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದರು. ಶನಿವಾರ ಬಂದ ಪರೀಕ್ಷಾ ಫಲಿತಾಂಶದಲ್ಲಿ ಆಕೆಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿಯಿತು. ಆದರೆ ಭಾನುವಾರ ತಿರುಪುರದ ಉಡುಪು ರಫ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು.

ವಧುವಿನ ಕುಟುಂಬ ಸದಸ್ಯರು ಆರೋಗ್ಯ ಅಧಿಕಾರಿಗಳಿಗೆ ಮದುವೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದರು. ಅವಳಲ್ಲಿ ರೋಗಲಕ್ಷಣವಿಲ್ಲದ ಕಾರಣ, ಆರೋಗ್ಯ ಅಧಿಕಾರಿಗಳು ಆದಾಯ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಕೆಲ ಷರತ್ತುಗಳೊಂದಿಗೆ ವಿವಾಹ ಸಮಾರಂಭಕ್ಕೆ ಅನುಮತಿ ನೀಡಿದರು.

ದಂಪತಿಗಳು ಗಂಗವಳ್ಳಿಯ ವರನ ಮನೆಯಲ್ಲಿ ಸರಳವಾಗಿ ಮದುವೆ ಸಮಾರಂಭ ನಡೆಯಿತು. ನಿರ್ದೇಶನದಂತೆ ಸಮಾರಂಭಕ್ಕೆ ಹಾಜರಾದ 28 ಆಪ್ತ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಸೇಲಂ ಕಲೆಕ್ಟರ್ ಎಸ್.ಎ.ರಾಮನ್ ಅವರು ತಿಳಿಸಿದ್ದಾರೆ. ಮಾನವೀಯ ಆಧಾರದ ಮೇಲೆ ಮದುವೆಗೆ ಅನುಮತಿ ನೀಡಿದ್ದೇವು, ನಂತರ ಎರಡು ಕುಟುಂಬಗಳಿಗೆ ಕೊರೋನಾ ಮಾರ್ಗಸೂಚಿ ಅನುಸರಿಸುವಂತೆ ಆದೇಶಿಸಲಾಗಿದೆ ಎಂದರು. 

ಕಠಿಣ ಸಾಮಾಜಿಕ ಅಂತರ ಶಿಸ್ತನ್ನ ಅನುಸರಿಸಿ ಕುಟುಂಬ ಸದಸ್ಯರಿಗೆ ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಅವರು ಹೇಳಿದರು. ಮದುವೆಯಾದ ಕೂಡಲೇ, ದಂಪತಿಗಳು ಸೇರಿದಂತೆ ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಸಮಾರಂಭಕ್ಕೆ ಹಾಜರಾದವರು ತಾವು ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ ಮತ್ತು ಯಾವುದೇ ಉಲ್ಲಂಘನೆಯ ಮಾಡುವುದಿಲ್ಲ ಎಂದು ಲಿಖಿತ ಹೇಳಿಕೆ ಪಡೆದಿರುವುದಾಗಿ ಹೇಳಿದರು. 

SCROLL FOR NEXT