ದೇಶ

ವಿಯೆಟ್ನಾಂ ನಲ್ಲಿ 1,100 ವರ್ಷದ ಹಿಂದಿನ ಬೃಹತ್ ಶಿವಲಿಂಗ ಪತ್ತೆ!

Srinivas Rao BV

ವಿಯೆಟ್ನಾಂ: ವಿಯೆಟ್ನಾಂ ಭೌಗೋಳಿಕವಾಗಿ ಭಾರತದಿಂದ ದೂರವಿರಬಹುದು ಆದರೆ ಸಾಂಸ್ಕೃತಿಕವಾಗಿ ಹತ್ತಿರದಲ್ಲಿರುವುದಕ್ಕೆ ಅತ್ಯುತ್ತಮ ಸಾಕ್ಷ್ಯ ಲಭ್ಯವಾಗಿದೆ. 

ಭಾರತದ ಪುರಾತತ್ವ ಸಂಸ್ಥೆ (ಎಎಸ್ಐ) ವಿಯೆಟ್ನಾಂ ನಲ್ಲಿ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಬೃಹತ್ ಗಾತ್ರದ ಶಿವಲಿಂಗ ಪತ್ತೆಯಾಗಿದ್ದು, 9 ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತಿದೆ. ಮೈ ಸನ್ ಅಭಯಾರಣ್ಯದಲ್ಲಿರುವ ಚಾಂ ಟೆಂಪಲ್ ಕಾಂಪ್ಲೆಕ್ಸ್ ನಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೆಶಾಂಗ ಸಚಿವ ಎಸ್ ಜೈಶಂಕರ್, ಈಗ ಪತ್ತೆಯಾಗಿರುವ ಶಿವಲಿಂಗ ವಿಶ್ವಾದ್ಯಂತ ಭಗವಾನ್ ಶಿವನ ಭಕ್ತರ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ದೃಢೀಕರಿಸಿದೆ ಎಂದು ಹೇಳಿದ್ದು ಶಿವಲಿಂಗದ ಫೋಟೊವನ್ನು ಹಂಚಿಕೊಂಡು ಈ ಪ್ರದೇಶಕ್ಕೆ ತಾವು 2011 ರಲ್ಲಿ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. 

ಅಯೋಧ್ಯೆ ರಾಮಜನ್ಮಭೂಮಿಯಲ್ಲಿಯೂ ಶಿವಲಿಂಗ ಪತ್ತೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದ್ದು, ಕಾಮಗಾರಿ ವೇಳೆ ದೇವಾಲಯಗಳ ಅವಶೇಶಗಳು  5 ಅಡಿಯ ಶಿವಲಿಂಗ ಪತ್ತೆಯಾಗಿದೆ. 

SCROLL FOR NEXT